‘ಇಸ್ಕಾನ್ ಗೋವುಗಳನ್ನು ಮಾರಾಟ ಮಾಡ್ತಿದೆ’ ಮನೇಕಾ ಗಾಂಧಿ ಆರೋಪಕ್ಕೆ ಇಸ್ಕಾನ್ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಸಂಸದೆ ಮನೇಕಾ ಗಾಂಧಿ ಇಸ್ಕಾನ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ, ಗೋಮಾಂಸ ಮಾರುವವರಿಗೆ ಇಸ್ಕಾನ್ ನೀಡಿದಷ್ಟು ಗೋವುಗಳನ್ನು ಯಾರೂ ನೀಡಿಲ್ಲ ಎಂದಿದ್ದಾರೆ.

ಈ ಬಗ್ಗೆ ಇಸ್ಕಾನ್ ಪ್ರತಿಕ್ರಿಯೆ ನೀಡಿದ್ದು , ಇದು ಆಧಾರ ರಹಿತ ಆರೋಪ ಎಂದಿದೆ. ಮನೇಕಾ ಗಾಂಧಿ ಆರೋಪವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಇಸ್ಕಾನ್ ಒಂದೇ ಒಂದು ಗೋವನ್ನೂ ನಾವು ಮಾರಿಲ್ಲ ಎಂದಿದೆ. ಬದುಕಿರುವವರೆಗೂ ಗೋವುಗಳು ಗೋಶಾಲೆಯಲ್ಲಿಯೇ ಇರುತ್ತವೆ. ಈ ಆರೋಪ ಸುಳ್ಳು ಎಂದಿದೆ.

ಕಟುಕರಿಗೆ ಇಸ್ಕಾನ್ ಗೋವುಗಳನ್ನು ಮಾರುತ್ತದೆ ಎನ್ನುವ ಗಂಭೀರ ಆರೋಪ ಕೇಳಿಬಂದಂತೆ ಈ ಬಗ್ಗೆ ತನಿಖೆಯಾಗಲಿ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!