CRIME| ಡ್ರಗ್ ಇಂಜೆಕ್ಷನ್ ಗ್ಯಾಂಗ್ ಬಂಧನ: ಏಳು ಸಾವಿರ ಚುಚ್ಚುಮದ್ದು ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶಾಖಪಟ್ಟಣಂನಲ್ಲಿ ಡ್ರಗ್ ಇಂಜೆಕ್ಷನ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಎಂಟು ಜನರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 7,000 ಮಾದಕ ಚುಚ್ಚುಮದ್ದನ್ನು ವಶಪಡಿಸಿಕೊಳ್ಳಲಾಗಿದೆ. ಯುವಕರನ್ನು ಗುರಿಯಾಗಿಸಿಕೊಂಡು ಕೆಲವರು ಗ್ಯಾಂಗ್ ಕಟ್ಟಿಕೊಂಡು ಮಾದಕ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯಿಂದ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ವಿಶಾಖದಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದಾಗ ಎಂಟು ಜನರನ್ನು ಬಂಧಿಸಲಾಯಿತು. ಎರಡು ದಿನದಲ್ಲಿ ಮೂರು ಪ್ರಕರಣಗಳಲ್ಲಿ ಗ್ಯಾಂಗ್ ನಿಂದ ಏಳು ಸಾವಿರ ಮಾದಕ ಚುಚ್ಚುಮದ್ದು ವಶಪಡಿಸಿಕೊಂಡು ವಶಪಡಿಸಿಕೊಳ್ಳಲಾಗಿದೆ.

ವಿಶಾಖಪಟ್ಟಣಂನಲ್ಲಿ ಮಾದಕ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ತಂಡವೊಂದು ಸಿಕ್ಕಿಬಿದ್ದಿದೆ. ಎಂಟು ಜನರನ್ನು ಬಂಧಿಸಲಾಯಿತು. ಇವರಿಂದ ಏಳು ಸಾವಿರ ಮಾದಕ ಚುಚ್ಚುಮದ್ದು, ಕಾರು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಫೋನ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಯುವಕರನ್ನು ಟಾರ್ಗೆಟ್ ಮಾಡಿ ಹಣ ಮಾಡುತ್ತಿರುವುದು ಪೊಲೀಸರಿಂದ ಪತ್ತೆಯಾಗಿದೆ. ಇತ್ತೀಚಿಗೆ ಮಾದಕ ವಸ್ತುಗಳ ಸೇವನೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ನಿಗಾ ವಹಿಸಿ ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!