September 14, 2026
Monday, September 14, 2026
spot_img

‘ಮ್ಯೂಸಿಕ್ ಸ್ಪೀಕರ್‌’ನಲ್ಲಿ ಮಾದಕ ಜಾಲ: ಭಾರತಕ್ಕೆ ಬರುತ್ತಿದ್ದ 13 ಕೋಟಿ ರೂ. ಮೌಲ್ಯದ ಕೊಕೇನ್ ಜಪ್ತಿ ಮಾಡಿದ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತಕ್ಕೆ ಕಳುಹಿಸಲಾಗುತ್ತಿದ್ದ ಭಾರೀ ಪ್ರಮಾಣದ ಕೊಕೇನ್ ಸಾಗಾಟವನ್ನು ಅಮೆರಿಕದ ಗಡಿ ಸುಂಕ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಸಂಗೀತ ಉಪಕರಣಗಳ ಹೆಸರಿನಲ್ಲಿ ರವಾನೆಯಾಗಿದ್ದ ಪಾರ್ಸೆಲ್‌ನಲ್ಲಿ ಅಡಗಿಸಲಾಗಿದ್ದ ಸುಮಾರು 22 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಪೀಕರ್‌ಗಳೊಳಗೆ ಅಡಗಿಸಿದ್ದ ಮಾದಕ ವಸ್ತು

ಡೊಮಿನಿಕನ್ ರಿಪಬ್ಲಿಕ್‌ನಿಂದ ದೆಹಲಿಗೆ ಕಳುಹಿಸಲಾಗುತ್ತಿದ್ದ ಪಾರ್ಸೆಲ್‌ನ್ನು ತಪಾಸಣೆ ನಡೆಸಿದ ವೇಳೆ, ನಾಲ್ಕು ಸ್ಪೀಕರ್‌ಗಳು ಮತ್ತು ಎರಡು ಆಂಪ್ಲಿಫೈಯರ್‌ಗಳೊಳಗೆ ಬಿಳಿ ಪುಡಿ ರೂಪದ ಮಾದಕ ವಸ್ತು ಪತ್ತೆಯಾಯಿತು. ಪರೀಕ್ಷೆಯಲ್ಲಿ ಅದು ಕೊಕೇನ್ ಎಂದು ದೃಢಪಟ್ಟಿದೆ.

ಇದನ್ನೂ ಓದಿ:

₹13 ಕೋಟಿಗೂ ಅಧಿಕ ಮೌಲ್ಯ

ವಶಪಡಿಸಿಕೊಂಡ ಕೊಕೇನ್‌ನ ಒಟ್ಟು ತೂಕ ಸುಮಾರು 22.35 ಕೆಜಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕಾಳಸಂತೆಯಲ್ಲಿ ಇದರ ಮೌಲ್ಯ ಸುಮಾರು 15 ಲಕ್ಷ ಅಮೆರಿಕನ್ ಡಾಲರ್‌ (ಸುಮಾರು ₹13 ಕೋಟಿ) ಎಂದು ಅಂದಾಜಿಸಲಾಗಿದೆ.

ಕಳ್ಳಸಾಗಣೆ ಜಾಲದ ತನಿಖೆ ಆರಂಭ

ಫಿಫಾ ವಿಶ್ವಕಪ್ 2026 ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ವಿಶೇಷ ಕಾರ್ಯಾಚರಣೆಯ ವೇಳೆ ಈ ಜಪ್ತಿ ನಡೆದಿದೆ. ಪ್ರಕರಣವನ್ನು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ತನಿಖಾ ಸಂಸ್ಥೆ (HSI) ಕೈಗೆತ್ತಿಕೊಂಡಿದ್ದು, ಡ್ರಗ್ಸ್ ಕಳ್ಳಸಾಗಣೆ ಜಾಲದ ಸಂಪರ್ಕಗಳ ಕುರಿತು ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !