Wednesday, October 5, 2022

Latest Posts

ಮಾದಕದ್ರವ್ಯ ಸಾಗಣೆ: ಪಂಜಾಬ್‌ ದಂಪತಿ ಕಾಶ್ಮೀರದಲ್ಲಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾಶ್ಮೀರ ಪೋಲೀಸರು ಮತ್ತೊಂದು ಮಾದಕ ದ್ರವ್ಯ ಸಾಗಣೆಯನ್ನು ತಡೆಹಿಡಿಯಲು ಯಶಸ್ವಿಯಾಗಿದ್ದು ಗುಪ್ತವಾಗಿ ಮಾದಕ ದ್ರವ್ಯ ಹೊಂದಿದ್ದ ಪಂಜಾಬ್‌ ಮೂಲದ ದಂಪತಿಯನ್ನು ಕಾಶ್ಮೀರದ ಉಧಮ್‌ ಪುರದಲ್ಲಿ ಬಂಧಿಸಲಾಗಿದೆ.

ದಂಪತಿಯ ಬಳಿಯಿಂದ ಏಳು ಕೆಜಿ ಹೆರಾಯಿನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಲವ್ಪ್ರೀತ್ ಸಿಂಗ್ ಮತ್ತು ಅವರ ಪತ್ನಿ ಮನ್ದೀಪ್ ಕೌರ್ ಅವರನ್ನು ಪೋಲೀಸರು ತಡೆದು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ, ಆರೋಪಿಗಳು ಪಂಜಾಬ್‌ನ ಅಮೃತಸರದ ರಾಮತೀರ್ಥ ರಸ್ತೆಯಿಂದ ಬಂದವರಾಗಿದ್ದು ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆದಾರರು ಎನ್ನಲಾಗಿದೆ. ಅವರ ವಿರುದ್ಧ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!