ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 60 ಕೋಟಿ ಮೌಲ್ಯದ ಡ್ರಗ್ಸ್‌ ವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ಪ್ರಯಾಣಿಕರೊಬ್ಬನಿಂದ ಬರೋಬ್ಬರಿ 60 ಕೋಟಿ ಮೌಲ್ಯದ 30 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಂಬಾಬ್ವೆಯಿಂದ ದೋಹಾ ಮೂಲಕ ಕೊಚ್ಚಿಗೆ ಆಗಮಿಸಿದ್ದ ಪಲಕ್ಕಾಡ್‌ ಮೂಲದ ಮುರಳೀಧರನ್ ನಾಯರ್ ಎಂಬುವವರ ಬ್ಯಾಗ್‌ ನಲ್ಲಿ  ಮೆಥಾ ಕ್ವಿನಾಲ್ ಡ್ರಗ್ಸ್‌ ಅನ್ನು ವಶಕ್ಕೆ ಪಡೆಯಲಾಗಿದೆ.
ಪ್ರಯಾಣಿಕ ಕೊಚ್ಚಿಯಿಂದ ದೆಹಲಿಗೆ ಏರ್ ಏಷ್ಯಾ ವಿಮಾನವನ್ನು ಹತ್ತುವಾಗ ಬ್ಯಾಗೇಜ್‌ಗಳ ಪರೀಕ್ಷಣೆ ವೇಳೆ ಡ್ರಗ್ಸ್‌ ಪತ್ತೆಯಾಗಿದೆ. ಅತ್ಯಾಧುನಿಕ ‘3ಡಿ ಎಂಆರ್‌ಐ’ ಸ್ಕ್ಯಾನಿಂಗ್ ಯಂತ್ರವನ್ನು ಬಳಸಿಕೊಂಡು ಸಿಐಎಎಲ್‌ನ ಭದ್ರತಾ ವಿಭಾಗವು ಬ್ಯಾಗ್‌ನಲ್ಲಿ ಅಡಗಿಸಿಟ್ಟ ವಸ್ತುವನ್ನು ಪತ್ತೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!