Monday, September 26, 2022

Latest Posts

ಅಮಿತ್ ಶಾ-ಜ್ಯೂನಿಯರ್‌ ಎನ್‌ಟಿಆರ್ ಭೇಟಿ: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಯಂಗ್‌ ಟೈಗರ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣ ಮುನುಗೋಡು ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಆಯೋಜಿಸಿರುವ ಸ್ವಾಭಿಮಾನ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ರಾಜಕೀಯ ಸಭೆಗೆ ಆಗಮಿಸುತ್ತಿರುವ ಅಮಿತ್ ಶಾ ಭೇಟಿಯ ಭಾಗವಾಗಿ ಜೂ.ಎನ್.ಟಿ.ಆರ್. ಅವರನ್ನು ಭಾನುವಾರ ರಾತ್ರಿ ನೊವಾಟೆಲ್ ಹೋಟೆಲ್ ನಲ್ಲಿ ಭೇಟಿ ಮಾಡಲಿದ್ದಾರೆ. ಇವರಿಬ್ಬರ ಭೇಟಿ ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಸಭೆಯನ್ನು ಎರಡು ರೀತಿಯಲ್ಲಿ ಊಹಿಸಲಾಗಿದೆ. ಆರ್‌ಆರ್‌ಆರ್ ಚಿತ್ರದ ಮೂಲಕ ಎನ್‌ಟಿಆರ್ ದೇಶಾದ್ಯಂತ ಹೆಸರು ಗಳಿಸಿದ್ದಾರೆ. ಅಮಿತ್ ಶಾ ಅವರು ಇತ್ತೀಚೆಗೆ RRR ಚಿತ್ರವನ್ನು ವೀಕ್ಷಿಸಿ, ಅದರಲ್ಲಿ ಎನ್ಟಿಆರ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ಬಗ್ಗೆ ಅಭಿನಂದಿಸಲು ಭೇಟಿಯಾಗುತ್ತಿರಬಹುದು ಎಂಬುದು ಒಂದು ಕಡೆ. ಆದರೆ ಸಿನಿಮಾ ಬಗ್ಗೆ ಮಾತನಾಡಬೇಕು ಅಂದ್ರೆ ಎನ್‌ಟಿಆರ್ ಜೊತೆಗೆ ಚರಣ್ ಮತ್ತು ರಾಜಮೌಳಿ ಅವರನ್ನೂ ಕರೆಯಬೇಕಿತ್ತು ಎಂಬ ಸುದ್ದಿ ಹರಿದಾಡುತ್ತಿದೆ.

ಕೆಲವರು ಇದನ್ನು ರಾಜಕೀಯ ಸಭೆ ಎಂದು ವರದಿ ಮಾಡಿದ್ದಾರೆ. ತೆಲಂಗಾಣ ರಾಜಕೀಯದ ಮೇಲೆ ವಿಶೇಷ ಗಮನ ಹರಿಸಿರುವ ಬಿಜೆಪಿ ತೆಲಂಗಾಣದಲ್ಲಿ ಎನ್‌ಟಿಆರ್‌ ಅವರನ್ನು ಬಳಸಿಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. ಅದಕ್ಕಾಗಿಯೇ ಆರ್‌ಆರ್‌ಆರ್ ಬರಹಗಾರ ವಿಜಯೇಂದ್ರ ಪ್ರಸಾದ್‌ಗೂ ರಾಜ್ಯಸಭಾ ಸಂಸದ ಸ್ಥಾನ ನೀಡಲಾಗಿದೆ. ಈ ಸಭೆ ರಾಜಕೀಯ ಮುಖಂಡರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ ಮತ್ತು ರಾಜಕೀಯ ವಲಯಗಳ ಜೊತೆಗೆ ಎನ್ ಟಿಆರ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕೂಡ ಈ ಸಭೆಗೆ ಆಸಕ್ತಿ ತೋರುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!