ಕುಡಿದು ತೂರಾಡಿ ವಿಮಾನದಿಂದ ಹೊರಗೆ ಹಾಕಿಸಿಕೊಂಡ್ರಾ ಪಂಜಾಬ್‌ ಸಿಎಂ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕುಡಿದ ಮತ್ತಿನಲ್ಲಿದ್ದ ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಲುಫ್ತಾನ್ಸಾ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಪಂಜಾಬ್‌ ಭಾರೀ ಕೊಲಾಹಲ ಸೃಷ್ಟಿಸಿದೆ. ಪಂಜಾಬ್ ಮುಖ್ಯಮಂತ್ರಿ ಮಾನ್ ವಿಶ್ವದಾದ್ಯಂತ‌ ಇರುವ ಪಂಜಾಬಿಗಳನ್ನು ನಾಚಿಕೆಪಡಿಸಿದ್ದಾರೆ ಎಂದು ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಿವೆ.
ಪಂಜಾಬ್‌ಗೆ ಹೂಡಿಕೆ ಆಕರ್ಷಿಸಲು ಮಾನ್ ಸೆಪ್ಟೆಂಬರ್ 11 ರಿಂದ 18ರ ವರೆಗೆ ಜರ್ಮನಿ ಪ್ರವಾಸ ಕೈಗೊಂಡಿದ್ದರು. ಅಲ್ಲಿಂದ ಹೊರಟಿದ್ದ ಭಗವಂತ್ ಮಾನ್ ಫ್ರಾಂಕ್‌ಫರ್ಟ್‌ನಿಂದ ಭಾನುವಾರ ಮಧ್ಯಾಹ್ನ 1.40 ರ ವಿಮಾನವನ್ನು ಹತ್ತಬೇಕಿತ್ತು. ಆದರೆ ಕೊನೆಗೆ ವಿಮಾನ ಸಂಜೆ 4.30ಕ್ಕೆ ವಿಮಾನ ಹಾರಿತು. ವಿಮಾನ ತಡವಾಗಲು ಮಾನ್‌ ಅವರೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ. ಕೊನೆಗೂ ಮಾನ್‌ ಆ ವಿಮಾನದಲ್ಲಿ ಪ್ರಯಾಣಿಸದೆ ಸೋಮವಾರದ ಮುಂಜಾನೆ ಬೇರೆ ವಿಮಾನದಲ್ಲಿ ದೆಹಲಿಗೆ ಬಂದಿದ್ದಾರೆ ವರದಿಯಾಗಿದೆ.
“ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ನಿಲ್ಲಲು ಸಾಧ್ಯವಾಗದಷ್ಟು ಕುಡಿದಿದ್ದರಿಂದ ಅವರನ್ನು ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಸಹ ಪ್ರಯಾಣಿಕರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಪ್ರಕಟವಾಗಿವೆ. ಮನ್‌ ಸ್ಥಿರವಾಗಿ ನಿಲ್ಲಲು ಅವರ ಪತ್ನಿ ಮತ್ತು ಭದ್ರತಾ ಸಿಬ್ಬಂದಿ ನೆರವು ನೀಡಬೇಕಾಯಿತು. ಇದರಿಂದ 4 ಗಂಟೆಗಳ ಕಾಲ ವಿಮಾನ ಹಾರಾಟ ವಿಳಂಬಕ್ಕೆ ಕಾರಣವಾಯಿತು. ಕೊನೆಗೆ ಮಾನ್‌ ಅವರನ್ನು ವಿಮಾನದಿಂದ ಕೆಳಗಿಳಿಸಿ ಹಾರಾಟ ನಡೆಸಲಾಯಿತು. ಇದರಿಂದಾಗಿ ಮಾನ್ ಎಎಪಿಯ ರಾಷ್ಟ್ರೀಯ ಸಮಾವೇಶವನ್ನು ತಪ್ಪಿಸಿಕೊಂಡರು ಎಂದು ವರದಿಯಾಗಿದೆ. ‌ʼಈ ವರದಿಗಳು ಮುಜುಗರಕ್ಕೆ ಕಾರಣವಾಗಿವೆ ಮತ್ತು ಜಗತ್ತಿನಾದ್ಯಂತ ಇರುವ ಪಂಜಾಬಿಗಳನ್ನು ನಾಚಿಕೆಪಡಿಸಿದೆ. ಈ ಘಟನೆ ಬಗ್ಗೆ ಆಪ್‌ ಸ್ಪಷ್ಟನೆ ನೀಡಬೇಕು. ಘಟನೆ ನಿಜವಾದರೆ ಮಾನ್‌ ಅವರನ್ನು ಪದಚ್ಯುತಗೊಳಿಸಬೇಕು” ಎಂದು ಅಕಾಲಿ ದಳದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಫ್ರಾಂಕ್‌ಫರ್ಟ್‌ನಲ್ಲಿ ದೆಹಲಿಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮುಖ್ಯಮಂತ್ರಿ ಪಾನಮತ್ತರಾಗಿದ್ದರು ಎಂದು ಹೇಳಿರುವ ಸುದ್ದಿ ವರದಿಯನ್ನು ಟ್ವಿಟ್‌ ಮಾಡಿರುವ ಕಾಂಗ್ರೆಸ್ ಪಂಜಾಬ್‌ ಮುಖ್ಯಮಂತ್ರಿಯನ್ನು ಲೇವಡಿ ಮಾಡಿದೆ.

ಆದರೆ ಈ ವರದಿಗಳನ್ನು ಆಮ್‌ ಆದ್ಮಿ ಪಕ್ಷ ನಿರಾಕರಿಸಿದೆ. ಮಾನ್ ಅನಾರೋಗ್ಯದ ಕಾರಣದಿಂದ ದೆಹಲಿಗೆ ಹಿಂತಿರುಗಲು ವಿಳಂಬವಾಗಿದೆ. ʼವಿರೋಧ ಪಕ್ಷಗಳು ಅಪ್ರಚಾರವನ್ನು ಹರಡುತ್ತಿವೆʼ ಎಂದು ಅದು ಆರೋಪಿಸಿದೆ.
ಮಾನ್ ಅವರು ತಮ್ಮ ವಿದೇಶಿ ಪ್ರವಾಸದಿಂದ ಒಂದಷ್ಟು ಹೂಡಿಕೆಯನ್ನು ಪರಿಣಾಮಕಾರಿಯಾಗಿ ತರುತ್ತಿರುವುದರಿಂದ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಈ ಬಗ್ಗೆ ಅಗತ್ಯವಿದ್ದರೆ ಲುಫ್ಥಾನ್ಸಾ ಏರ್‌ಲೈನ್ಸ್‌ ದಾಖಲೆ ಪರಿಶೀಲಿಸಬಹುದು” ಎಂದು ಎಎಪಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!