ಶೀಘ್ರದಲ್ಲೇ ಕ್ರಿಪ್ಟೋಗೆ ಬೀಳಲಿದೆಯೇ ಜಿಎಸ್‌ಟಿ ಕಡಿವಾಣ: ಏನನ್ನುತ್ತಿವೆ ವರದಿಗಳು !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಕ್ರಿಪ್ಟೋ ಕರೆನ್ಸಿಗಳ ಕುರಿತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಕಳವಳ ವ್ಯಕ್ತಪಡಿಸಿರುವುದರ ಬೆನ್ನಲ್ಲೇ ಇದೀಗ ದೇಶದಲ್ಲಿ ವ್ಯಾಪಕವಾಗಿ ಆವರಿಸಿಕೊಂಡಿರುವ ಕ್ರಿಪ್ಟೋಗಳ ಜಾಲದ ಮೇಲೆ ಪರೋಕ್ಷ ತೆರಿಗೆ ಜಾರಿಗೆ ತರಲು ಸರ್ಕಾರ ಯೋಚಿಸುತ್ತಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್18‌ ವರದಿ ಮಾಡಿದೆ.

ಈ ಕುರಿತು ಸರ್ಕಾರವು ಕ್ರಿಪ್ಟೋ ಸ್ವತ್ತುಗಳಿಗಾಗಿ ಸಮಗ್ರ ಅಧ್ಯಯನವನ್ನು ಪ್ರಾರಂಭಿಸಿದ್ದು ಅವುಗಳನ್ನು ನಿಯಂತ್ರಿಸಲು ಸಮರ್ಥ ಮಾರ್ಗವನ್ನು ಹುಡುಕುತ್ತಿದೆ ಎನ್ನಲಾಗಿದೆ. ಈ ನಿಯಮಗಳನ್ನು ರೂಪಿಸುವುದರಿಂದ ಬೊಕ್ಕಸಕ್ಕೆ ಆಗುತ್ತಿರುವ ಆದಾಯ ಸೋರಿಕೆಯು ನಿಲ್ಲಲಿದ್ದು ಕ್ರಿಪ್ಟೋ ಆಸ್ತಿಗಳ ನೈಜ ಸ್ವರೂಪದ ಬಗ್ಗೆ ಸ್ಪಷ್ಟ ಚಿತ್ರಣವೂ ಸಿಗಲಿದೆ. ಹೇಳಿದೆ. ಕ್ರಿಪ್ಟೋಕರೆನ್ಸಿಗಳು ಶೇಕಡಾ 18 ಮತ್ತು 28 ರ ನಡುವೆ ಜಿಎಸ್‌ಟಿ ದರಗಳನ್ನು ಆಕರ್ಷಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಿಂಟ್‌ನ ವರದಿಯ ಪ್ರಕಾರ, ಹಣಕಾಸು ಸಚಿವಾಲಯವು ಕ್ರಿಪ್ಟೋಕರೆನ್ಸಿಗಳ ಗುಣಲಕ್ಷಣಗಳು, ಅವುಗಳ ಬಳಕೆ ಮತ್ತು ಅವು ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ. ಕಾನೂನು ಸ್ವರೂಪವನ್ನು ನಿರ್ಧರಿಸಿದ ನಂತರ, ಸೂಕ್ತವಾದ ಜಿಎಸ್‌ಟಿ ದರವನ್ನು ಹೊಂದಿಸಲಾಗುತ್ತದೆ ಎನ್ನಲಾಗಿದೆ.

ಆ ಮೂಲಕ ಷೇರು ಮಾರುಕಟ್ಟೆಗೆ ಸೆಬಿಯಂತೆಯೇ ಕ್ರಿಪ್ಟೋಗಳನ್ನೂ ನಿಯಂತ್ರಿಸಲು ಸರ್ಕಾರ ಯತ್ನಿಸುತ್ತಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!