VIRAL VIDEO| ಮೆಟ್ರೋದಲ್ಲಿ ಯುವತಿಯ ರಂಪಾಟ: ಮದ್ಯದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ದೆಹಲಿ ಮೆಟ್ರೋ ನಾನ್‌ ಸೆನ್ಸ್‌ಗೆ ಕೇರಾಫ್ ಅಡ್ರೆಸ್ ಆಗಿ ಮಾರ್ಪಟ್ಟಿದೆ. ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ನಡೆಯುತ್ತಿರುವ ಘಟನೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೊನ್ನೆಯಷ್ಟೇ ಯುವತಿಯೊಬ್ಬಳು ಬಿಕಿನಿ ಧರಿಸಿ ಮೆಟ್ರೋದಲ್ಲಿ ಸಂಚರಿಸಿದ್ದಳು. ಇದೀಗ ಮತ್ತೊಬ್ಬ ಯುವತಿ ಮದ್ಯದ ಅಮಲೇರಿ ಮನಸೋ ಇಚ್ಛೆ ವರ್ತಿಸಿದ್ದಾರೆ.

ಆ ಯುವತಿ ಕಂಠಪೂರ್ತಿ ಕುಡಿದು ಮೆಟ್ರೋ ಹತ್ತಿ ಸಹ ಪ್ರಯಾಣಿಕರಿಗೆ ಕಿರಿ ಕಿರಿ ಮಾಡಿದ್ದಾಳೆ. ಮೆಟ್ರೋ ರೈಲು ಹತ್ತಿದ ಯುವತಿ ಹಾಗೂ ಯುವಕ ಎದುರಿನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನೊಂದಿಗೆ ಜಗಳವಾಡಿದಳು. ಅಷ್ಟೇ ಅಲ್ಲ ಅವಾಚ್ಯ ಶಬ್ದಗಳಿಂದ ಪ್ರಯಾಣಿಕನನ್ನು ನಿಂದಿಸಿದ್ದಾರೆ. ಪಕ್ಕದಲ್ಲಿದ್ದ ಯುವಕ ಸುಮ್ಮನಿರಿಸಲು ಯತ್ನಿಸಿದರೂ ಆಕೆ ಕಿವಿಗೊಡಲಿಲ್ಲ. ಕುಡಿದ ಅಮಲಿನಲ್ಲಿ ಯುವತಿ ದಾಳಿ ಮಾಡಲು ಹೋಗಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!