October 8, 2026
Thursday, October 8, 2026
spot_img

ಕುಡಿದ ಮತ್ತಿನಲ್ಲಿ ಕಿರಿಕ್: ಸಪ್ಲೈಯರ್ ತಲೆಗೆ ಕುರ್ಚಿಯಿಂದ ಹೊಡೆದು ಹಲ್ಲೆ

ಹೊಸದಿಗಂತ ವರದಿ ದಾವಣಗೆರೆ:

ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಸಪ್ಲೈಯರ್ ಮೇಲೆ ಕುರ್ಚಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ನಗರದ ಶಾಬನೂರು ರಸ್ತೆಯ ಪವನ್ ಬಾರ್ ನಲ್ಲಿ ನಡೆದಿದೆ.

ಬಾರ್ ನಲ್ಲಿ ಕುಡಿಯಲು ಬಂದಿದ್ದ ವ್ಯಕ್ತಿಯೊಬ್ಬ ಅಲ್ಲೇ ಕೆಲಸ ಮಾಡುತ್ತಿದ್ದ ಸಪ್ಲೈಯರ್ ಸಿದ್ದೇಶನ ತಲೆ ಮೇಲೆ ಏಕಾಏಕಿ ಕುರ್ಚಿಯನ್ನು ಎತ್ತಿ ಹಾಕಿ, ಹಲ್ಲೆ ಮಾಡಿದ್ದಾನೆ. ನಂತರ ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಗಂಭೀರ ಗಾಯಗಳಾದ ಸಿದ್ದೇಶನನ್ನು ತಕ್ಷಣವೇ ಬಾರ್ ಮಾಲೀಕರು, ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಬಾರ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಲೆ ಮರೆಸಿಕೊಂಡ ಆರೋಪಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read