VIRAL | ಕಂಠಪೂರ್ತಿ ಕುಡಿದು ಶಾಲೆಗೆ ನುಗ್ಗಿದ ಕುಡುಕ, ಪ್ಯಾಂಟ್‌ನಲ್ಲಿ ಬಾಟಲ್‌ ಇಟ್ಟುಕೊಂಡು ಅಸಹ್ಯ ವರ್ತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕುಡುಕನೊಬ್ಬ ಟೈಟ್‌ ಆಗಿ ಶಾಲೆಗೆ ಬಂದು ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಇಷ್ಟೇ ಅಲ್ಲದೆ ಪ್ಯಾಂಟ್‌ನೊಳಗೆ ಎಣ್ಣೆ ಬಾಟಲಿ ಇಟ್ಟುಕೊಂಡು ಶಿಕ್ಷಕಿಯರೊಡನೆ ಅಸಭ್ಯ ವರ್ತನೆ ತೋರಿದ್ದಾನೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಶಿವ ಕುಮಾರ್ ಎಂಬ ವ್ಯಕ್ತಿ ಮದ್ಯ ಸೇವಿಸಿ ಶಾಲೆಗೆ ನುಗ್ಗಿದ್ದಾನೆ. ತನ್ನ ಪ್ಯಾಂಟ್‌ನಲ್ಲಿ ಮದ್ಯದ ಬಾಟಲಿಯನ್ನು ಇಟ್ಟುಕೊಂಡು ಶಾಲೆಯಲ್ಲಿ ದಾಂಧಲೆ ನಡೆಸಿದ್ದಾನೆ. ಶಾಲೆಯ ಬೆಂಚ್ ಮೇಲೆ ಕುಳಿತುಕೊಂಡ ಈ ವ್ಯಕ್ತಿ ಮಹಿಳಾ ಶಿಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸಿ, ಬೆದರಿಕೆ ಹಾಕಿದ್ದಾನೆ.

ಈ ವ್ಯಕ್ತಿಯ ಅಸಭ್ಯ ವರ್ತನೆಯನ್ನು ಮಹಿಳಾ ಶಿಕ್ಷಕಿಯೊಬ್ಬರು ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ತರಗತಿಯಲ್ಲಿದ್ದ ಓರ್ವ ಹುಡುಗ ಶಿವಕುಮಾರ್ ಗೆ ಹೊರಗೆ ಹೋಗುವಂತೆ ಹೇಳಿ ಗದರಿಸಲು ಪ್ರಯತ್ನಿಸಿದ್ದಾನೆ. ಆದರೆ ಆತ ತನ್ನ ಹುಚ್ಚಾಟವನ್ನು ಇನ್ನಷ್ಟು ಹೆಚ್ಚು ಮಾಡಿ ತನ್ನ ಶರ್ಟ್ ತೆಗೆದು ತರಗತಿಯಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಅಲ್ಲದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ  ನಿಮ್ಮ ಕರ್ತವ್ಯದ ಸಮಯ ಮುಗಿದಿದೆ, ಇಲ್ಲಿಂದ ಹೊರಡಿ ಎಂದು ಬೆದರಿಕೆ ಹಾಕಿದ್ದಾನೆ.

ಶಿಕ್ಷಕರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಶಿವಕುಮಾರ್‌ನ್ನು ವಶಕ್ಕೆ ಪಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!