ಹೊಸದಿಗಂತ ಡಿಜಿಟಲ್ ಡೆಸ್ಕ್:
16 ವರ್ಷದ ಮೂವರು ಶಾಲಾ ಬಾಲಕಿಯರು ಒಟಟಿಗೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಯುವತಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದು, ಇನ್ನೊಬ್ಬಳು ಬಾಲಕಿಯ ಸ್ಥಿತಿ ಗಂಭೀರವಾಗಿದೆ.
ಘಟನೆ ವಿವರ
ಮಧ್ಯಪ್ರದೇಶದ ಆಸ್ತಾ ಜಿಲ್ಲೆಯ ಮೂವರು ಬಾಲಕಿಯರು ಶಾಲೆಗೆ ಚಕ್ಕರ್ ನೀಡಿ, ಬಸ್ ಹತ್ತಿ 120 ಕಿ.ಮೀ. ಇರುವ ಇಂದೋರ್‌ಗೆ ಹೋಗಿದ್ದಾರೆ. ಅಲ್ಲಿ ವಿಷ ಖರೀದಿಸಿ, ಪಾರ್ಕ್ ಬಳಿ ಕುಳಿತು ಸೇವಿಸಿದ್ದಾರೆ.
ಮೂವರಲ್ಲಿ ಒಬ್ಬಾಕೆಯ ಬಾಯ್‌ಫ್ರೆಂಡ್ ಇಂದೋರ್‌ನಲ್ಲಿದ್ದ. ಆತ ಫೋನ್ ಸ್ವೀಕರಿಸುತ್ತಿರಲಿಲ್ಲ, ಮಾತನಾಡಿಸುತ್ತಿಲ್ಲ ಎಂದು ಬಾಲಕಿ ಬೇಸರಿಸಿಕೊಂಡಿದ್ದಳು, ಮಾತನಾಡಿಲ್ಲವಾದರೆ ವಿಷ ಕುಡಿಯುತ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬ ಯುವತಿ ಕುಟುಂಬ ಸಮಸ್ಯೆಯಿಂದ ಬೇಸತ್ತು ವಿಷ ಕುಡಿಯುವ ನಿರ್ಧಾರಕ್ಕೆ ಬಂದಿದ್ದಳು ಎನ್ನಲಾಗಿದೆ.
ಆಸ್ಪತ್ರೆಯಲ್ಲಿರುವ ಮೂರನೇ ಬಾಲಕಿ ಈ ಬಗ್ಗೆ ಮಾಹಿತಿ ನೀಡಿದ್ದು, ಅವರಿಬ್ಬರಿಗೂ ಕಾರಣಗಳಿತ್ತು. ನನಗೆ ಯಾವ ಕಾರಣವೂ ಇಲ್ಲ, ಅವರಿಬ್ಬರೂ ನನ್ನ ಆಪ್ತ ಸ್ನೇಹಿತರು ಅವರು ವಿಷ ಕುಡಿದರು ಎಂದು ನಾನೂ ಕುಡಿದೆ ಎಂದು ಹೇಳಿದ್ದಾಳೆ.
ಸ್ಥಳೀಯರು ಮೂವರು ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ವೇಲೆ ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.