ಆತಂಕ ಹುಟ್ಟಿಸಿದೆ ಅಮಲು: ದೇಶದಲ್ಲಿ ‘ಯುವ ಕುಡುಕ’ರ ಸಂಖ್ಯೆ ಹೆಚ್ಚಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈದ್ಯಕೀಯ ನಿಯತಕಾಲಿಕೆ ’ಲ್ಯಾನ್ಸೆಟ್’ ತನ್ನ ಅಧ್ಯಯನ ವರದಿ ಪ್ರಕಟಿಸಿದ್ದು, ದೇಶದಲ್ಲಿ ಕಳೆದ ಮೂರು ದಶಕಗಳಲ್ಲಿ 40 ರಿಂದ 64 ವರ್ಷ ವಯಸ್ಸಿನವರಲ್ಲಿ ಮದ್ಯ ಸೇವನೆ ಪ್ರಮಾಣ ಶೇ 5.63ರಷ್ಟು ಹೆಚ್ಚಳವಾಗಿದೆ ಎಂಬ ಆಘಾತಕಾರಿ ಸುದ್ದಿ ನೀಡಿದೆ.
1990ರಿಂದ ಈವರೆಗೆ ನಡೆಸಿದ ಅಧ್ಯಯನ ಇದಾಗಿದ್ದು, ಇನ್ನೂ ಆಘಾತಕಾರಿ ವಿಚಾರವೆಂದರೆ ಇದೇ ಅವಧಿಯಲ್ಲಿ 15ರಿಂದ 39 ವರ್ಷ ವಯಸ್ಸಿನವರಲ್ಲಿ ಮದ್ಯ ಸೇವನೆ ಪ್ರಮಾಣ ಶೇ 5.24ರಷ್ಟು ಹೆಚ್ಚಾಗಿದೆ. ಇನ್ನು 65 ವರ್ಷ ಮೇಲ್ಪಟ್ಟವರಲ್ಲಿ ಈ ಪ್ರಮಾಣ ಶೇ 2.88ರಷ್ಟು ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಅದು ನೀಡಿದೆ.

1990ರಿಂದ ಈವರೆಗೆ ೪೦ರಿಂದ 64 ವರ್ಷ ವಯಸ್ಸಿನವರಲ್ಲಿ ಮದ್ಯ ಸೇವನೆ ಪ್ರಮಾಣ ಶೇ 5.63ರಷ್ಟು ಹೆಚ್ಚಾಗಿದೆ. ಇದೇ ವೇಳೆ 15ರಿಂದ 39 ವರ್ಷ ವಯಸ್ಸಿನ ಮಹಿಳೆಯರಲ್ಲಿ ಮದ್ಯ ಸೇವನೆ ಪ್ರಮಾಣ ಶೇ 0.08ರಷ್ಟು ಹೆಚ್ಚಾಗಿದೆ. 40ರಿಂದ 64 ವರ್ಷ ವಯಸ್ಸಿನವರಲ್ಲಿ ಶೇ 0.15ರಷ್ಟು ಹೆಚ್ಚಾಗಿದೆ ಎಂದಿರುವ ವರದಿ, 65 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಮಾತ್ರ ಮದ್ಯ ಸೇವನೆ ಪ್ರಮಾಣ ಇಳಿಕೆಯಾಗಿದೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!