ಕೇರಳದಲ್ಲಿ ಮಂಕಿಪಾಕ್ಸ್: ಏನೇನಿದೆ ಕೇಂದ್ರದ ಹೊಸ ಗೈಡ್‌ಲೈನ್‌ನಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗೈಡ್‌ಲೈನ್ ಬಿಡುಗಡೆ ಮಾಡಿದೆ.

ಏನಿದೆ ಹೊಸ ಗೈಡ್‌ಲೈನ್‌ನಲ್ಲಿ?

  • ರೋಗ ಲಕ್ಷಣ ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ ಔಷಧಿ ಪಡೆಯುವುದು.
  • ರೋಗದ ಕುರಿತಾಗಿ ಸರಿಯಾಗಿ ಮಾಹಿತಿ ನೀಡುವುದು
  • ಅಂತಾರಾಷ್ಟ್ರೀಯ ಪ್ರಯಾಣಿಕರು ಅನಾರೋಗ್ಯವಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರದೇ ಇರುವುದು
  • ಇಲಿ, ಅಳಿಲು, ಕೋತಿ ಮತ್ತು ಸಸ್ತನಿಗಳು ಸೇರಿದಂತೆ ಸತ್ತ ಅಥವಾ ಜೀವಂತ ಕಾಡು ಪ್ರಾಣಿಗಳ ಸಂಪರ್ಕದಿಂದ ದೂರವಿರುವುದು
  • ಕಾಡು ಪ್ರಾಣಿಗಳ ಮಾಂಸವನ್ನು ತಿನ್ನದೇ ಇರುವುದು
  • ಆಫ್ರಿಕಾ ಸೇರಿದಂತೆ ಇತರ ದೇಶಗಳಲ್ಲಿ ಕಾಡು ಪ್ರಾಣಿಗಳಿಂದ ಉತ್ಪಾದಿಸಿದ ಉತ್ಪನ್ನ, ಕ್ರೀಮ್ ಲೋಷನ್ ಬಳಸದಿರುವುದು

ಯುಎಇಯಿಂದ ಹಿಂದಿರುಗಿದ ಕೇರಳ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಪಾಸಿಟಿವ್ ದೃಢಪಡುವ ಮೂಲಕ ದೇಶದಲ್ಲೇ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ರೋಗಿಯು ಜುಲೈ 12 ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!