ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸತತವಾಗಿ ಅಬ್ಬರದ ಮಳೆಯಾಗುತ್ತಿದ್ದು,ಈ ಮಧ್ಯೆ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಬಾರಿ ಮಳೆ ಸುರಿದ ಪರಿಣಾಮ ನಾಲೆಗಳು ತುಂಬಿ ಹರಿದು ಮಂಗಲಗಿ ಗ್ರಾಮದ ಕಿರು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಧಾರಾಕಾರ ಮಳೆಗೆ ಮಂಗಲಗಿ ಹಾಗೂ ಸೇಡಂ ನಡುವೆ ಇರುವ ಸಂಪರ್ಕ ಮತ್ತು ಕಾಳಗಿ ಮಂಗಲಗಿ ಹಾದು ಹೋಗುವ ಸಂಪರ್ಕ ಸ್ಥಗಿತಗೊಂಡಿದೆ.ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡು ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಗಿದೆ.