ರಶ್ಮಿಕಾ – ದುಲ್ಕರ್‌ ನಟನೆಯ ‘ಸೀತಾ ರಾಮಂ’ಗೆ ಸಂಕಷ್ಟ: ಹಲವು ದೇಶದಲ್ಲಿ ಚಿತ್ರ ಬ್ಯಾನ್; ಕಾರಣವಾದರೂ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ದುಲ್ಕರ್​ ಸಲ್ಮಾನ್​, ರಶ್ಮಿಕಾ ಮಂದಣ್ಣ, ಮೃಣಾಲ್​ ಠಾಕೂಲ್​ ನಟಿಸಿರುವ ‘ಸೀತಾ ರಾಮಂ’ ಚಿತ್ರ ಆಗಸ್ಟ್ 5 ರಂದು ರಿಲೀಸ್‌ ಗೆ ರೆಡಿಯಾಗಿದೆ. ಆದರೆ ಬಿಡುಗಡೆಗೆ ಒಂದೆರೆಡು ದಿನಗಳಷ್ಟೇ ಬಾಕಿ ಇರುವಂತೆ ಚಿತ್ರತಂಡಕ್ಕೆ ಶಾಂಕಿಂಗ್‌ ನ್ಯೂಸ್‌ ಎದುರಾಗಿದ್ದು,  ಚಿತ್ರವನ್ನು ಗಲ್ಫ್ ದೇಶಗಳಲ್ಲಿ ನಿಷೇಧಿಸಲಾಗಿದೆ. ಇದರಿಂದ ದುಲ್ಕರ್‌ ಸಲ್ಮಾನ್ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.
ರೊಮ್ಯಾಂಟಿಕ್ ಡ್ರಾಮಾ ಸೀತಾ ರಾಮಂ’ ಅನ್ನು ಖ್ಯಾತ ನಿರ್ದೇಶಕ ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ.  ದುಲ್ಕರ್  ಚಿತ್ರದಲ್ಲಿ ಲೆಫ್ಟಿನೆಂಟ್‌ ರಾಮ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ ಮುಸ್ಲಿಂ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.
ಇದೀಗ ಹೊರಬಿದ್ದಿರುವ ಮಾಹಿತಿಯಂತೆ, ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ಸೀತಾರಾಮಂ ಬಿಡುಗಡೆಯನ್ನು  ನಿಷೇಧಿಸಲಾಗಿದೆ. ಬ್ಯಾನ್‌ಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ಚಿತ್ರದಲ್ಲಿ ಮುಸ್ಲಿಮರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿವೆ ಎಂಬ ಕಾರಣಕ್ಕೆ ನಿಷೇಧ ಹೇರಲಾಗಿದೆ ಎಂದು ಹೇಳಲಾಗುತ್ತಿದೆ.
ನಿಶೇದದಿಂದ ಬೇಸರಗೊಂಡಿರುವ ನಿರ್ಮಾಪಕರು ಚಿತ್ರದ ಮರು ಸೆನ್ಸಾರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದುಲ್ಕರ್ ಸಲ್ಮಾನ್ ಅವರ ಚಿತ್ರಗಳಿಗೆ ಗಲ್ಫ್ ದೇಶಗಳು ದೊಡ್ಡ ಮಾರುಕಟ್ಟೆಯಾಗಿರುವುದರಿಂದ ಈ ಕ್ರಮವು ಚಿತ್ರದ ಮೇಲೆ ದೊಡ್ಡ ಹೊಡೆತವನ್ನು ನೀಡಲಿದೆ ಎಂದು ಅಂದಾಜಿಸಲಾಗುತ್ತಿದೆ.

ಕಾಶ್ಮೀರ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯರಾಗಿ ನಟಿಸಿದರೆ, ಗೌತಮ್ ಮೆನನ್, ಪ್ರಕಾಶ್ ರಾಜ್ ಸೇರಿದಂತೆ ಖ್ಯಾತ ನಟರು ಸಹ ಪಾತ್ರವರ್ಗದ ಭಾಗವಾಗಿದ್ದಾರೆ. ಚಿತ್ರವು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ವೈಜಯಂತಿ ಮೂವೀಸ್‌ ಬಂಡವಾಳ ಹೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!