40 ಸಾವಿರ ಹೂಡಿಕೆ ಮಾಡಿ ತೆರೆದ ಬೇಕರಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಆದಾಯ! ಈ ಬೇಕರಿ ಬಗ್ಗೆ ಕೇಳಿದ್ದೀರಾ?

  • ಹಿತೈಷಿ

12 ವರ್ಷಗಳ ಕಾಲ ಅಮೆರಿಕದಲ್ಲಿ ಇದ್ದು ಪಡೆದಿರೋದು ಸಾಫ್ಟ್ ವೇರ್ ಇಂಜಿನೀಯರ್ ಪದವಿ. ಆದರೆ ಈಗ ಇವರು 20ಲಕ್ಷ ರೂ.ಗೂ ಹೆಚ್ಚು ಲಾಭ ಮಾಡುವ ಒಂದು ಬೇಕರಿಯ ಮಾಲಕಿ.

Lluvia Bakery – Tagged "INSTOCK" – Qtrove

ಇವರ ಹೆಸರು ದುರ್ಗಾ ಮೆನನ್. ಸಮಾಜಕ್ಕೆ ಅರ್ಥಪೂರ್ಣವಾದ ಕೊಡುಗೆ ನೀಡಬೇಕೆಂದು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮರಳಿದರು. ದುರ್ಗಾ ತಮ್ಮ ಗಂಡನ ಪ್ರೋತ್ಸಾಹದಿಂದ ಆರೋಗ್ಯಕರ ತಿನಿಸುಗಳನ್ನು ತಯಾರಿಸಲು ಮುಂದಾದರು.
ಆಗಲೇ ನಮ್ಮ ಬೆಂಗಳೂರಿನಲ್ಲಿ ಶುರುವಾಯ್ತು ಲುವಿಯಾ ಬೇಕರಿ. ಇಲ್ಲಿ ಸಿಗುವ ಎಲ್ಲಾ ತಿನಿಸುಗಳು ಆರೋಗ್ಯಕರ ಮತ್ತು ರುಚಿಕರ.

ಶುರು ಹೇಗಾಯ್ತು ಗೊತ್ತಾ?
ಮನೆಯಲ್ಲಿ ರುಚಿಯಾದ ತಿನಿಸುಗಳನ್ನು ಬೇಕ್ ಮಾಡುತ್ತಿರುವ ದುರ್ಗಾ ಅವರನ್ನು ಗಮನಿಸಿದ ಪತಿ. ಆಕೆಯನ್ನು ಇದರಲ್ಲೇ ಆಸಕ್ತಿ ಹೆಚ್ಚಿಸಿ ಒಂದು ಬೇಕರಿ ಶುರು ಮಾಡೋಕೆ ಪ್ಲಾನ್ ಕೊಟ್ಟರು. ಅದರಂತೆಯೇ 40 ಸಾವಿರ ರೂ. ಹೂಡಿಕೆ ಮಾಡಿ 9 ವರ್ಷದ ಹಿಂದೆ ಶುರು ಮಾಡಿದ್ದೇ ಈ ಲುವಿಯಾ ಬೇಕರಿ.

Techie Quits US Job, Opens Bakery In India to Empower Underprivileged

ಏನು ವಿಶೇಷತೆ?
ಎಲ್ಲಾ ಬೇಕರಿಗಳಲ್ಲಿ ಕಮರ್ಷಿಯಲ್ ಆಗಿ ಪ್ರಿಸರ್ವೇಟೀವ್ ಗಳನ್ನು ಬಳಸಿ ಮಾಡುವ ಬೇಕರಿ ಪದಾರ್ಥಗಳಾಗಿವೆ. ಇವುಗಳನ್ನು ಮೆಟ್ಟಿನಿಂತು ಆರೋಗ್ಯಕರ ಗೋಧಿಯಿಂದಲೇ ಆಹಾರ ತಯಾರಿಸೋದು ಇಲ್ಲಿನ ವಿಶೇಷ.

Lluvia Bakery- Bengaluru - The Yellow Turmericತಯಾರಿಕೆ ಹೇಗೆ?
ಇಲ್ಲಿ ಯಾರಿಗಾದರೂ ಬ್ರೆಡ್ ಗಳು ಬೇಕಿದ್ದರೆ ಮುಂಚಿತವಾಗಿಯೇ ಆರ್ಡರ್ ಮಾಡುತ್ತಿದ್ದರಂತೆ. ಇದರೊಂದಿಗೆ ಫ್ರೆಶ್ ಹಾಗೂ ಆರೋಗ್ಯಕರ ಬ್ರೆಡ್ ಸೇವನೆಗೆ ಅಡ್ಜಸ್ಟ್ ಆಗೋಕೆ ಜನರಿಗೆ ತುಂಬಾ ಸಮಯವೇನು ಬೇಕಾಗಲಿಲ್ಲ. ಕ್ರಮೇಣ ಈ ಬೇಕರಿ ಜನಪ್ರೀಯತೆ ಪಡೆಯೋಕೆ ಶುರುವಾಯ್ತು. ಈಗ ಭಾರೀ ಲಾಭ ಪಡೆಯುತ್ತಿದೆ.

Durga Menon Tells Us How She's Cooking Careers Of Underprivileged Women At  Her Organic Bakeryಮತ್ತೊಂದು ವಿಶೇಷ:
ಇಲ್ಲಿ ನಮಗೆ ಬ್ರೆಡ್, ಪಿಜ್ಜಾ ಎಲ್ಲಾ ತಯಾರಿ ಮಾಡೋಕೆ ಅಂತಲೇ 10 ಮಂದಿ ಇದ್ದಾರೆ. ಮತ್ತೆ ಅವರೆಲ್ಲರೂ ಮಹಿಳೆಯರೂ ಮತ್ತು ಸಿಂಗಲ್ ಪೇರೆಂಟ್ ಗಳೇ.
ಅವರಿಗೂ ವಿಶೇಷವಾದ ಬೇಕಿಂಗ್ ಕುರಿತು ಟ್ರೈನಿಂಗ್ ಕೂಡ ಕೊಟ್ಟಿದ್ದಾರೆ ದುರ್ಗಾ. ಈ ಮಹಾನ್ ಕಾರ್ಯದಿಂದ ಈ 10 ಮಹಿಳೆಯರ ಕುಟುಂಬಕ್ಕೆ ಆಸರೆಯಾಗಿದೆ ಈ ಲುವಿಯಾ ಬೇಕರಿ.

Techie Quits US Job, Opens Bakery In India to Empower Underprivileged

ಹೇಗಿದೆ ವ್ಯಾಪಾರ?
ಪ್ರಾರಂಭದ ವರ್ಷದಲ್ಲಿ ಲುವಿಯಾಗೆ 60 ಸಾವಿರ ರೂ. ಲಾಭ ಬಂದರೆ 2013ರಲ್ಲಿ 12 ಲಕ್ಷ ರೂ. ಆಗಿದೆ. ಅಷ್ಟೇ ಅಲ್ಲ ಇವರು ಈ ಲಾಭದೊಂದಿಗೆ ಬೇಕರಿಯ ಮತ್ತೊಂದು ಬ್ರ್ಯಾಂಚ್ ಓಪನ್ ಮಾಡಿದ್ದಾರೆ.
ಜೀವನದಲ್ಲಿ ಏನಾದರೂ ವಿಭಿನ್ನವಾಗಿರೋದನ್ನು ಪ್ರಯತ್ನಿಸೋಕೆ ತುಂಬಾ ಚಿಂತಿಸಬೇಕಿಲ್ಲ. ದೃಢ ನಿರ್ಧಾರ ಹಾಗೂ ಪ್ರಾಮಾಣಿಕತೆಯೇ ಯಶಸ್ಸಿಗೆ ಕಾರಣ ಅನ್ನೋದನ್ನ ದುರ್ಗಾ ಮೆನನ್ ತಿಳಿಸಿಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!