SHOCKING | ಪರೀಕ್ಷೆ ಸಮಯದಲ್ಲಿ ಉಗ್ರರು ನುಂಗುವ ಮಾತ್ರೆ ಸೇವಿಸ್ತಾರೆ ವಿದ್ಯಾರ್ಥಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ವೇಳೆ ನಿದ್ದೆ ಬಾರದಂತಿರಲು ಮಾತ್ರೆ ಸೇವಿಸುವ ಆಘಾತಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇರುವ ಕಾರಣ ನಿದ್ದೆಯಿಲ್ಲದೆ ಓದಲು ಮಕ್ಕಳು ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈ ಮಾತ್ರೆಗಳಿಂದಾಗಿ ಗಂಭೀರ ಸಮಸ್ಯೆ ಎದುರಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಸಾಮಾನ್ಯವಾಗಿ ಈ ಮಾತ್ರೆಗಳನ್ನು ಉಗ್ರರು ಸೇವಿಸುತ್ತಾರೆ. ಒಂದು ಮಾತ್ರೆ ತೆಗೆದುಕೊಂಡರೆ ಕನಿಷ್ಠ 40 ಗಂಟೆಗಳ ಕಾಲ ನಿದ್ದೆ ಬರುವುದಿಲ್ಲ. ಭಯೋತ್ಪಾದಕ ದಾಳಿ ವೇಳೆ ನಿದ್ದೆ ಬಾರದಂತಿರಲು ಭಯೋತ್ಪಾದಕರು ಈ ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಮಾರುಕಟ್ಟೆಗಳಲ್ಲಿ ಸಿಗುವುದಿಲ್ಲ. ಆದರೆ ಕಳ್ಳ ಮಾರ್ಗದಲ್ಲಿ, ಬೇರೆ ಮಾತ್ರೆ ಹೆಸರಿನಲ್ಲಿ ಸಿಗುತ್ತದೆ ಎನ್ನಲಾಗಿದೆ.

ಗೊತ್ತಾಗಿದ್ದು ಹೇಗೆ?
ಉತ್ತರ ಪ್ರದೇಶದ 10 ನೇ ತರಗತಿ ವಿದ್ಯಾರ್ಥಿನಿ ಪ್ರಾಜಕ್ತಾ ಸ್ವರೂಪ್ ಓದುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಪಾಸಣೆ ವೇಳೆ ಆಕೆಯ ಮೆದುಳಿನ ನರಗಳಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ಹೇಳಿದ್ದು, ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೀಗ ವಿದ್ಯಾರ್ಥಿನಿ ಚೇತರಿಸಿಕೊಳ್ಳುತ್ತಿದ್ದಾಳೆ.

ವಿದ್ಯಾರ್ಥಿನಿ ಏಕಾಏಕಿ ಆಸ್ಪತ್ರೆಗೆ ದಾಖಲಾದ ಕಾರಣ ಪೋಷಕರು ಪ್ರಾಜಕ್ತಾ ಕೊಠಡಿ ಪರಿಶೀಲನೆ ನಡೆಸಿದಾಗ ಮಾತ್ರೆಯ ಬಾಟಲಿ ಸಿಕ್ಕಿದೆ. ಅದನ್ನು ವೈದ್ಯರಿಗೆ ತೋರಿಸಿದಾಗ ಅದು ನಿದ್ದೆ ಬಾರದ ಔಷಧಿ ಎಂದು ತಿಳಿದುಬಂದಿದೆ. ಪ್ರಾಜಕ್ತಾ ಅಷ್ಟೇ ಅಲ್ಲ ಎಷ್ಟೋ ವಿದ್ಯಾರ್ಥಿಗಳು ಈ ಮಾತ್ರೆ ತೆಗೆದುಕೊಂಡು ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ ಎನ್ನುವ ಆಘಾತಕಾರಿ ಅಂಶ ಬಯಲಾಗಿದೆ.

ಈ ಮಾತ್ರೆಗಳನ್ನು ಸೇವಿಸಬೇಡಿ ಎಂದು ವೈದ್ಯರು ಸಲಹೆ ನೀಡಿದ್ದು, ಮಾತ್ರೆಯನ್ನು ಮಾರಾಟಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೈದ್ಯರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!