ಭಾರತದಲ್ಲಿ ಅತಿ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ಸ್ ಇರೋದು ಕರ್ನಾಟಕದಲ್ಲೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಅತಿ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ಸ್ ಇರೋದು ಕರ್ನಾಟಕದಲ್ಲೇ!

ಹೌದು, ರಾಜ್ಯದಲ್ಲಿ 5,059 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳಿಗೆ. ಇಷ್ಟೊಂದು ಚಾರ್ಜಿಂಗ್ ಸ್ಟೇಷನ್ಸ್ ಕರ್ನಾಟಕ ಬಿಟ್ಟು ಇನ್ಯಾವ ರಾಜ್ಯದಲ್ಲೂ ಇಲ್ಲ.

ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿನ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಪ್ರಕಾರ ಬೆಂಗಳೂರಿನಲ್ಲಿಯೇ 4,281 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳಿವೆ.

ಅಂದರೆ ಕರ್ನಾಟಕದಲ್ಲಿ ಶೇ.85ರಷ್ಟು ಸಾರ್ವಜನಿಕ ಸ್ಟೇಷನ್‌ಗಳು ಬೆಂಗಳೂರಿನಲ್ಲಿಯೇ ಇವೆ. ಮಹಾರಾಷ್ಟ್ರದಲ್ಲಿ 3,079 ಹಾಗೂ ದೆಹಲಿಯಲ್ಲಿ1,886 ಚಾರ್ಜಿಂಗ್ ಸ್ಟೇಷನ್‌ಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!