Tuesday, February 7, 2023

Latest Posts

ಹಾರಾಟದ ವೇಳೆ ಯಡವಟ್ಟು: ಕರೆಂಟ್ ಕಂಬದಲ್ಲಿ ಸಿಕ್ಕಿಹಾಕಿಕೊಂಡಿತು ವಿಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಗಲ್ ಇಂಜಿನ್‌ನ ಲಘು ವಿಮಾನವೊಂದು ಹಾರಾಟದ ವೇಲೆ ನಡೆದ ಯಡವಟ್ಟಿನಿಂದ ವಿದ್ಯುತ್ ಕಂಬದ ತಂತಿಗಳಲ್ಲಿ ಸಿಕ್ಕಿಹಾಕಿಕೊಂಡ ವಿಲಕ್ಷಣ ಘಟನೆ ಅಮೆರಿಕದ ಮೇರಿಲ್ಯಾಂಡ್ ರಾಜ್ಯದಲ್ಲಿ ನಡೆದಿದೆ.
ಈ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಮಾನ ಇನ್ನೂ ವಿದ್ಯುತ್ ತಂತಿಯಲ್ಲೇ ಉಳಿದುಕೊಂಡಿದ್ದು, ಅದನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.
ಮಾಹಿತಿಗಳ ಪ್ರಕಾರ ನ್ಯೂಯಾರ್ಕ್‌ನ ವೈಟ್‌ಪ್ಲೇನ್ಸ್‌ನಿಂದ ಹೊರಟಿದ್ದ ಈ ಸಿಂಗಲ್ ಎಂಜಿನ್ ವಿಮಾನ, ಸಂಜೆ ೫.೪೦ರ ಸುಮಾರಿಗೆ ಗೈಥರ್ಸ್‌ಬರ್ಗ್‌ನ ಮಾಂಟ್‌ಗೊಮೆರಿ ಕೌಂಟಿ ಏರ್‌ಪಾರ್ಕ್ ಬಳಿ ವಿದ್ಯುತ್ ತಂತಿಗಳಿಗೆ ಸಿಲುಕಿದೆ. ವಿಮಾನವು ನೆಲದಿಂದ ಸುಮಾರು ೧೦೦ ಅಡಿ ಎತ್ತರದಲ್ಲಿ ಸಿಲುಕಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!