Monday, December 11, 2023

Latest Posts

ದಸರಾ ಉತ್ಸವ: ಚಾಮುಂಡಿ ಬೆಟ್ಟದಲ್ಲಿ ಪೊಲೀಸ್‌ ಸರ್ಪಗಾವಲು, ಬೇಸತ್ತ ಜನ

 ಹೊಸದಿಗಂತ ವರದಿ ಮೈಸೂರು: 

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಜನರ ಭಾಗವಹಿಸುವಿಕೆ ಬಹಳ ಕಡಿಮೆಯಾಗಿತ್ತು.

ಮುಖ್ಯ ಮಂತ್ರಿಗಳು, ಸಚಿವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರಣ ಇಡೀ ಬೆಟ್ಟಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಹೆಜ್ಜೆ, ಹೆಜ್ಜೆಗೂ ಪೊಲೀಸರ ಕಿರಿಕಿರಿಯಿಂದ ಕಸಿವಿಸಿಗೊಂಡ ಜನರು, ಪ್ರವಾಸಿಗರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ದೂರದಿಂದಲೇ ಕೈ ಮುಗಿದರು.

ದಸರಾ ಉದ್ಘಾಟನೆ ಅಧಿಕಾರಿಗಳು, ಗಣ್ಯರಿಗೆ ಮಾತ್ರ ಸೀಮಿತವಾದಂತೆ ಕಂಡು ಬಂದಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!