ಮೈಸೂರು ದಸರಾ: ಕೆಎಸ್‌ಆರ್‌ಟಿಸಿ, ನಗರಸಾರಿಗೆ ಬಸ್‌ಗಳ ಸಂಚಾರ ಮಾರ್ಗ ಬದಲಾವಣೆ

ಹೊಸದಿಗಂತ ವರದಿ ಮೈಸೂರು:‌ 

ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರು ನಗರದ ಹೃದಯ ಭಾಗದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದ್ದು,  ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಕೆಎಸ್‌ಆರ್‌ಟಿಸಿ, ನಗರ ಸಾರಿಗೆ ಬಸ್‌ಗಳಿಗೆ ಅನ್ವಯವಾಗುವಂತೆ ಸಂಚಾರ ಮಾರ್ಗ ಬದಲಾವಣೆ ಮತ್ತು ತಾತ್ಕಾಲಿಕ ನಿಲುಗಡೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಅಕ್ಟೋಬರ್ 15 ರಿಂದ 22 ರವರೆಗೆ (ಪ್ರತಿದಿನ ಸಂಜೆ 4ರಿಂದ ರಾತ್ರಿ 11-00 ಗಂಟೆಯವರೆಗೆ) ನಗರದ ಹೊರ ಭಾಗಗಳಿಂದ ಆಗಮಿಸುವ ಹಾಗೂ ನಗರದಿಂದ ನಿರ್ಗಮಿಸುವ ಕೆ.ಎಸ್.ಆರ್.ಟಿ.ಸಿ. ಗ್ರಾಮಾಂತರ ಸಾರಿಗೆ ಬಸ್‌ಗಳು ಸಂಚರಿಸುವ ಮೈಸೂರು-ಬೆಂಗಳೂರು ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಬಸ್‌ಗಳ ಮಾರ್ಗ ಹೀಗಿದೆ.

ಆಗಮನ: ಬೆಂಗಳೂರು ರಸ್ತೆ- ನಾಡಪ್ರಭು ಕೆಂಪೇಗೌಡ ವೃತ್ತ- ಎಡ ತಿರುವು- ರಿಂಗ್ ರಸ್ತೆ ಮೂಲಕ ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ (ಸಾತಗಳ್ಳಿ ಬಸ್ ಡಿಪೋ)- ಮಹದೇವಪುರ ರಸ್ತೆ- ನೆಕ್ಸಸ್ ಮಾಲ್ ಜಂಕ್ಷನ್- ಕಾಳಿಕಾಂಬ ದೇವಸ್ಥಾನ ರಸ್ತೆ ಜಂಕ್ಷನ್ ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ಸರ್ಕಲ್) – ಬಿಎನ್ ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪುವುದು.

ನಿರ್ಗಮನ ವಿವರಗಳು: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ಸರ್ಕಲ್)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಡಾ|| ಬಿ.ಆರ್.ಅಂಬೇಡ್ಕರ್ ವೃತ್ತ (ಎಫ್.ಟಿ.ಎಸ್) ಡಾ|| ರಾಜಕುಮಾರ್ ವೃತ್ತ (ಫೌಂಟೆನ್ ಸರ್ಕಲ್)ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ) – ಬನ್ನಿಮಂಟಪ ರಸ್ತೆ- ನಂದಿ ಬಸಪ್ಪ ಗೋರಿ ಜಂಕ್ಷನ್- ಟೋಲ್ ಗೇಟ್- ನಾಡಪ್ರಭು ಕೆಂಪೇಗೌಡ ವೃತ್ತ- ಬೆಂಗಳೂರು ರಸ್ತೆ ಮೂಲಕ ಮುಂದೆ ಸಾಗುವುದು.

ಮಡಿಕೇರಿ, ಹಾಸನ ಕಡೆಯಿಂದ ಹುಣಸೂರು ರಸ್ತೆ ಮೂಲಕ ಮೈಸೂರು ನಗರಕ್ಕೆ ಬರುವ ಬಸ್‌ಗಳು, ಹುಣಸೂರು ರಸ್ತೆ- ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ವೃತ್ತ)ದಾಸಪ್ಪ ವೃತ್ತ- ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ ವೃತ್ತ) -ಮುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆ.ಕೆ.ಗೌಂಡ್)- ಶೇಷಾದ್ರಿ ಅಯ್ಯರ್ ರಸ್ತೆ ಸುಭಾಷ್‌ಚಂದ್ರ ಬೋಸ್ ವೃತ್ತ(ಆರ್.ಎಂ.ಸಿ) ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ಸರ್ಕಲ್)- ನೆಲ್ಸನ್ ಮಂಡೇಲಾ ರಸ್ತೆ- ಟಿ.ಎನ್.ನರಸಿಂಹಮೂರ್ತಿ ವೃತ್ತ(ಎಲ್.ಐ.ಸಿ ವೃತ್ತ)- ಅಪ್ಪು ವೃತ್ತ- ಡಾ|| ರಾಜಕುಮಾರ್ ವೃತ್ತ (ಫೌಂಟೆನ್ ವೃತ್ತ)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್ನವಾಬ್ ಹೈದರಾಲಿ ಖಾನ್ ವೃತ್ತ(ಫೈವ್ ಲೈಟ್ ವೃತ್ತ) ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!