ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹರಾಜಿನಲ್ಲಿ ಇ-ಸಿಗರೇಟ್ ಖರೀದಿಸಿ ಮಾರಾಟ ಮಾಡುತ್ತಿದ್ದ ಶಂಕಿತ ಆರೋಪಿಗಳನ್ನು ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಿದೇಶದಿಂದ ಆಗಮಿಸುವ ಪ್ರಯಾಣಿಕರಿಂದ ಇ-ಸಿಗರೇಟ್‌ಗಳನ್ನು ಜಪ್ತಿ ಮಾಡುತ್ತಾರೆ. ಸೀಜ್ ಮಾಡಿದ ಇ-ಸಿಗರೇಟ್‌ಗಳನ್ನು ಮತ್ತು ಇತರ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ.
ಇ-ಸಿಗರೇಟ್‌ಗಳನ್ನು ಹರಾಜಿನಲ್ಲಿ ಖರೀದಿಸುವ ಗ್ಯಾಂಗ್, ಇ-ಸಿಗರೇಟ್‌ಗಳನ್ನು ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲಿನೆಲಮಾಳಿಗೆಯಲ್ಲಿರುವ ಗೋದಾಮಿನಲ್ಲಿ ಇರಿಸಿದೆ. ನಂತರ ಬಳಕೆಯಾಗದ ಇ-ಸಿಗರೇಟ್ ಗಳನ್ನು 300-400 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದ ಜೆಜೆನಗರ ಪೊಲೀಸರು ಇಬ್ಬರು ಶಂಕಿತರ ಬಳಿಯಿದ್ದ 110 ಇ ಸಿಗರೇಟ್ ವಶಪಡಿಸಿಕೊಂಡಿದ್ದಾರೆ.