ಕಳಪೆ ಪ್ರೆಶರ್ ಕುಕ್ಕರ್ ಮಾರಿದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ಗೆ ಬಿತ್ತು ಬರೋಬ್ಬರಿ 1 ಲಕ್ಷ ರೂ. ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳಪೆ ಗುಣಮಟ್ಟದ ಪ್ರೆಶರ್ ಕುಕ್ಕರ್‌ಗಳನ್ನು ಮಾರಾಟ ಮಾಡಿ ಗ್ರಾಹಕರ ಹಕ್ಕು ಉಲ್ಲಂಘಿಸಿದ್ದಕ್ಕಾಗಿ ಇ-ಕಾಮರ್ಸ್ ಫ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ)ವು 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಮುಖ್ಯ ಆಯುಕ್ತ ನಿಧಿ ಖರೆ ಅವರ ನೇತೃತ್ವದಲ್ಲಿ, ಸಿಸಿಪಿಎ ಈ ಆದೇಶ ನೀಡಿದೆ. ಸಂಸ್ಥೆಯು ಕಡ್ಡಾಯ ಮಾನದಂಡ ಉಲ್ಲಂಘಿಸಿ ದೇಶೀಯ ಪ್ರೆಶರ್ ಕುಕ್ಕರ್ ಮಾರಾಟಕ್ಕೆ ಅವಕಾಶ ನೀಡಿದೆ. ಈ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಾರಾಟವಾದ ಎಲ್ಲಾ 598 ಪ್ರೆಶರ್ ಕುಕ್ಕರ್‌ಗಳ ಬಗ್ಗೆ ಸಂಸ್ಥೆಯು ಗ್ರಾಹಕರಿಗೆ ಮಾಹಿತಿ ನೀಡಬೇಕು. ಅಲ್ಲದೆ ಅವುಗಳನ್ನು ಗ್ರಾಹಕರಿಂದ ಹಿಂಪಡೆದು, ಬೆಲೆಗಳನ್ನು ಮರು ಪಾವತಿಸಬೇಕು. ಮುಂದಿನ 45 ದಿನಗಳ ಒಳಗಾಗಿ ಈ ಸಂಬಂಧ ವರದಿ ನೀಡಬೇಕು ಎಂದು ಸೂಚಿಸಿದೆ.

ಕಳಪೆ ಗುಣಮಟ್ಟದ ಪ್ರೆಶರ್ ಕುಕ್ಕರ್‌ಗಳನ್ನು ತನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡಲು ಅನುಮತಿ ನೀಡಿ ಗ್ರಾಹಕರ ಹಕ್ಕುಗಳನ್ನು ಉಲ್ಲಂಘನೆ ಮಾಡಿದಕ್ಕಾಗಿ ಕಂಪೆನಿ ಒಂದು ಲಕ್ಷ ರೂ. ದಂಡ ಪಾವತಿ ಮಾಡಬೇಕು ಎಂದು ಪ್ರಾಧಿಕಾರವು ನಿರ್ದೇಶನ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!