ಋಣಾತ್ಮಕವಾಗಿ ತೆರೆದ ಷೇರುಪೇಟೆ: ನಿಫ್ಟಿ, ಸೆನ್ಸೆಕ್ಸ್‌ ಎಷ್ಟಿದೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದುರ್ಬಲ ಜಾಗತಿಕ ಸೂಚನೆಗಳ ನಡುವೆ ಗುರುವಾರ ಬೆಳಗ್ಗೆ ಭಾರತೀಯ ಷೇರು ಮಾರುಕಟ್ಟೆಗಳು ಕ್ಷೀಣವಾಗಿ ತೆರೆದಿವೆ. ಫ್ರಂಟ್‌ಲೈನ್ ಸೂಚ್ಯಂಕ ನಿಫ್ಟಿ 30 ಪಾಯಿಂಟ್‌ಗಿಂತ ಹೆಚ್ಚು ಕುಸಿದು 17,950 ಮಟ್ಟಕ್ಕಿಂತ ಕೆಳಗೆ ವ್ಯಾಪಾರ ಮಾಡಿದೆ ಮತ್ತು ಬಿಎಸ್‌ಇ ಸೆನ್ಸೆಕ್ಸ್ 100 ಪಾಯಿಂಟ್‌ಗಳನ್ನು ಕುಸಿದು 60,160 ಮಟ್ಟದಲ್ಲಿ ವಹಿವಾಟು ನಡೆಸಿದೆ.

ಟಾಪ್‌ ಗೇನರ್ಸ್‌ & ಟಾಪ್‌ ಲೂಸರ್ಸ್:‌

ಬಜಾಜ್ ಟ್ವಿನ್ಸ್, ಪವರ್ ಗ್ರಿಡ್, ಭಾರ್ತಿ ಏರ್‌ಟೆಲ್, ಅಲ್ಟ್ರಾಟೆಕ್ ಸಿಮೆಂಟ್ ಅಗ್ರ ಲಾಭ ಗಳಿಸಿವೆ.

ಡಾ ರೆಡ್ಡೀಸ್, ಸನ್ ಫಾರ್ಮಾ, ವಿಪ್ರೋ, ಟೆಕ್ ಮಹೀಂದ್ರಾ ನಷ್ಟ ಅನುಭವಿಸಿವೆ.

ವಿಶಾಲವಾದ ಮಾರುಕಟ್ಟೆಗಳಲ್ಲಿ ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇಕಡಾ 0.2 ರಷ್ಟು ಏರಿಕೆ ಕಂಡವು. ವಲಯವಾರು, ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ರಿಯಾಲ್ಟಿ ಲಾಭಗಳಿಸಿದರೆ ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಬ್ಯಾಂಕ್ ನಷ್ಟವನ್ನು ಅನುಭವಿಸಿದವು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!