ಜನ ಅಭಿವೃದ್ಧಿಗಾಗಿ ಮತ್ತೆ ಬಿಜೆಪಿ ಬೆಂಬಲಿಸಲು ಉತ್ಸುಕರಾಗಿದ್ದಾರೆ: ಅರವಿಂದ ಲಿಂಬಾವಳಿ

ದಿಗಂತ ವರದಿ ವಿಜಯಪುರ:

ಅಭಿವೃದ್ಧಿ ಆಧಾರದ ಮೇಲೆ ಬಿಜೆಪಿ ಮತ ಯಾಚನೆ ನಡೆಸಿದೆ. ಕಳೆದ ಹತ್ತು ವರ್ಷಗಳ ಕಾಲ ಕೇಂದ್ರದ ಬಿಜೆಪಿ ಸರ್ಕಾರ ಕೈಗೊಂಡ ಅಭಿವೃದ್ಧಿ, ಸುರಕ್ಷತೆ ಆಧಾರದ ಮೇಲೆ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಹೀಗಾಗಿ ಜನ ಅಭಿವೃದ್ಧಿ ಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಪ್ರತಿಪಕ್ಷಗಳು ಆಡಳಿತ ವಿರೋಧಿ ಅಲೆ ಬಳಸಿಕೊಂಡು ಮತ ಯಾಚನೆ ಮಾಡುವುದು ವಾಡಿಕೆ. ಆದರೆ, ಮೋದಿ ಬಗ್ಗೆ ಯಾವುದೇ ಟೀಕೆ ಮಾಡಲು ಅವಕಾಶ ಇಲ್ಲದ ಕಾರಣ ಪ್ರತಿಪಕ್ಷಗಳು ಸುಳ್ಳು ಆರೋಪದಲ್ಲಿ ತೊಡಗಿಸಿಕೊಂಡಿವೆ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣ ವನ್ನು ಕಾಂಗ್ರೆಸ್ ರಾಜಕೀಕರಣಗೊಳಿಸುತ್ತಿದೆ. ಕಾಂಗ್ರೆಸ್ ಪಕ್ಷವೇ ಎಸ್ ಐಟಿ ರಚನೆ ಮಾಡಿದೆ. ತನಿಖೆ ಆಗಲಿದೆ. ಕಾನೂನು ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕು. ನಾವು ಕೂಡ ಪ್ರಕರಣವನ್ನು ಖಂಡಿಸುತ್ತೇವೆ‌ ಎಂದರು.

ನೇಹಾ ಪ್ರಕರಣ ಕೇವಲ ಒಂದು ಕೊಲೆ ಮಾತ್ರವಲ್ಲ, ಅದಕ್ಕೂ ಇದಕ್ಕೂ ಹೋಲಿಕೆ ಸರಿಯಲ್ಲ. ಕರ್ನಾಟಕದಲ್ಲಿ ಬಾಂಬ್ ಸ್ಪೋಟ ಮಾಡಿ ಕಲ್ಕತ್ತಾದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದರ ಹಿಂದೆ ಜಿಹಾದಿಗಳ ಕೈವಾಡದ ಶಂಕೆ ಇದೆ. ನೇಹಾ ಪ್ರಕರಣ ದೇಶ ವಿರೋಧಿ ಚಟುವಟಿಕೆಗಳ ಸಂಬಂಧವಿರಬಹುದು ಎಂಬ ಶಂಕೆಯೂ ಇದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!