ಭೂ ದಿನ 2022: ಹವಾಮಾನ ಬದಲಾವಣೆಯ ಪರಿಣಾಮ ತೋರಿಸುತ್ತಿದೆ ಗೂಗಲ್ ಡೂಡಲ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಗೂಗಲ್ ಸರ್ಚ್ ಇಂಜಿನ್‌ನ ಇಂದಿನ ಡೂಡಲ್ ವಿಶ್ವ ಭೂ ದಿನಕ್ಕಾಗಿ ಸಮರ್ಪಿಸಿಲಾಗಿದೆ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಯ ಕುರಿತು ತಿಳಿಸುತ್ತಿದೆ. ಹವಾಮಾನ ಬದಲಾವಣೆ ಸಮಸ್ಯೆಯು ಈ ಕಾಲದ ಅತ್ಯಂತ ಜ್ವಲಂತ ವಿಷಯಗಳಲ್ಲಿ ಒಂದಾಗಿದೆ. 1970ರಲ್ಲಿ ಆಧುನಿಕ ಪರಿಸರ ಚಳುವಳಿಯನ್ನು ಗುರುತಿಸಲು ಪ್ರತಿ ವರ್ಷ ಏಪ್ರಿಲ್ 22ರಂದು ಭೂ ದಿನವನ್ನು ಆಚರಿಸಲಾಗುತ್ತಿದೆ.

ಭೂಮಿಯ ಸುತ್ತಲಿನ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ತೋರಿಸಲು ಗೂಗಲ್ ಡೂಡಲ್ ರಿಯಲ್ ಟೈಮ್ ಲ್ಯಾಪ್ಸ್ ಇಮೇಜನರಿಯನ್ನು ಬಿಡುಗಡೆ ಮಾಡಿದೆ. ಪ್ರತಿ ಸ್ಥಳದ ಚಿತ್ರಣವನ್ನು ಗೂಗಲ್ ಸರ್ಚ್ ಎಂಜಿನ್‌ನ ಮುಖಪುಟದಲ್ಲಿ ಕೆಲ ಸಮಯ ಏಕಕಾಲದಲ್ಲಿ ಪ್ರದರ್ಶಿಸಲಾಗುತ್ತಿದೆ.

ಮೊದಲ ಡೂಡಲ್ ತಾಂಜಾನಿಯಾದ ಕಿಲಿಮಂಜಾರೋ ಪರ್ವತದ ಶಿಖರದಲ್ಲಿ ಹಿಮನದಿಯ ಕರಗುವಿಕೆಯ ನೈಜ ಚಿತ್ರಣವನ್ನು ಒಳಗೊಂಡಿದೆ. ಟೈಮ್ ಲ್ಯಾಪ್ಸ್‌ನಲ್ಲಿ ಬಳಸಿದ ಚಿತ್ರಗಳನ್ನು ಪ್ರತೀ ಡಿಸೆಂಬರ್‌ನಲ್ಲಿ 1986 ರಿಂದ 2020 ರವರೆಗೆ ತೆಗೆದುಕೊಳ್ಳಲಾಗಿದೆ.

ಮತ್ತೊಂದು ಚಿತ್ರಣವು 2000 ರಿಂದ 2020 ರವರೆಗೆ ಪ್ರತಿ ಡಿಸೆಂಬರ್‌ನಲ್ಲಿ ತೆಗೆದ ಚಿತ್ರಗಳನ್ನು ಬಳಸಿಕೊಂಡು ಗ್ರೀನ್‌ಲ್ಯಾಂಡ್‌ನ ಸೆರ್ಮರ್‌ಸೂಕ್‌ನಲ್ಲಿ ಹಿಮನದಿ ಕರಗುವಿಕೆಯನ್ನು ತೋರಿಸುತ್ತದೆ.

ಗೂಗಲ್ ಮುಖಪುಟದಲ್ಲಿ ಕಾಣಿಸಿಕೊಳ್ಳುವ ಮೂರನೇ ಚಿತ್ರಣವು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಆಗಿದ್ದು, ಲಿಝಾರ್ಡ್ ಐಲ್ಯಾಂಡ್‌ನಲ್ಲಿ ಹವಳದ ಬ್ಲೀಚಿಂಗ್ ಅನ್ನು ತೋರಿಸುತ್ತದೆ. ಡೂಡಲ್‌ನಲ್ಲಿ ಬಳಸಲಾದ ಚಿತ್ರಗಳನ್ನು ಮಾರ್ಚ್‌ನಿಂದ ಮೇ 2016 ರವರೆಗೆ ಪ್ರತಿ ತಿಂಗಳು ತೆಗೆದುಕೊಳ್ಳಲಾಗಿದೆ.

ನಾಲ್ಕನೇ ಮತ್ತು ಕೊನೆಯ ಡೂಡಲ್ ಜರ್ಮನಿಯ ಎಲೆಂಡ್‌ನಲ್ಲಿರುವ ಹಾರ್ಜ್ ಕಾಡುಗಳನ್ನು ತೋರಿಸುತ್ತದೆ. ಏರುತ್ತಿರುವ ತಾಪಮಾನ ಮತ್ತು ತೀವ್ರ ಬರದಿಂದಾಗಿ ತೊಗಟೆ ಜೀರುಂಡೆ ಮುತ್ತಿಕೊಳ್ಳುವಿಕೆಯಿಂದ ನಾಶವಾಗಿದೆ. ಚಿತ್ರಗಳನ್ನು 1995 ರಿಂದ 2020 ರವರೆಗೆ ಪ್ರತಿ ಡಿಸೆಂಬರ್‌ನಲ್ಲಿ ತೆಗೆದುಕೊಳ್ಳಲಾಗಿದೆ.

ಗೂಗಲ್ ಅರ್ಥ್ ಟೈಮ್‌ಲ್ಯಾಪ್ಸ್ ಮತ್ತು ಇತರ ಮೂಲಗಳಿಂದ ರಿಯಲ್ ಟೈಮ್‌ ಲ್ಯಾಪ್ಸ್ ಚಿತ್ರಣವನ್ನು ಬಳಸಿಕೊಂಡು, ಡೂಡಲ್ ಭೂಮಿಯ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ತೋರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!