Friday, March 31, 2023

Latest Posts

ಭೂಕಂಪ: 28,000 ಗಡಿ ದಾಟಿದ ಸಾವಿನ ಸಂಖ್ಯೆ, ಸಾವಿರಾರು ಮಂದಿ ಅವಶೇಷಗಳಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭೂಕಂಪದ ನಂತರ ಟರ್ಕಿ ಮತ್ತು ಸಿರಿಯಾದಾದ್ಯಂತ ಸತ್ತವರ ಸಂಖ್ಯೆ 28,192 ಕ್ಕೆ ತಲುಪಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಟರ್ಕಿಯ ಸಾವಿನ ಸಂಖ್ಯೆ 24,617 ಕ್ಕೆ ಏರಿದೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಿರಿಯಾದಲ್ಲಿ, ವೈಟ್ ಹೆಲ್ಮೆಟ್ಸ್ ಸಿವಿಲ್ ಡಿಫೆನ್ಸ್ ಗ್ರೂಪ್ ಪ್ರಕಾರ, ವಾಯುವ್ಯದಲ್ಲಿ ಬಂಡುಕೋರರ ಹಿಡಿತದಲ್ಲಿರುವ 2,167 ಸೇರಿದಂತೆ ಒಟ್ಟು 3,575 ಸಾವುಗಳ ಸಂಖ್ಯೆ ದಾಖಲಾಗಿದೆ.  ಸರ್ಕಾರದ ನಿಯಂತ್ರಿತ ಪ್ರದೇಶಗಳಲ್ಲಿ ಹೆಚ್ಚುವರಿ 1,408 ಸಾವುಗಳು ದಾಖಲಾಗಿವೆ ಎಂದು ದೇಶದ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಸಿರಿಯನ್ ರಾಜ್ಯ ಮಾಧ್ಯಮ ತಿಳಿಸಿದೆ.

ಫೆಬ್ರವರಿ 6 ರಂದು ಟರ್ಕಿಯಲ್ಲಿ ಸಂಭವಿಸಿದ ಭೂಕಂಪದ ನಂತರ ಕಾಣೆಯಾದ ಭಾರತೀಯ ಪ್ರಜೆ ಮಲತ್ಯದಲ್ಲಿನ ಹೋಟೆಲ್‌ನ ಅವಶೇಷಗಳ ಅಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದ್ದು, ಟರ್ಕಿಗೆ ವ್ಯಾಪಾರ ಪ್ರವಾಸದಲ್ಲಿದ್ದರು. ಈ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಕುಮಾರ್ ಅವರ ಕುಟುಂಬ ಸದಸ್ಯರು ತೀವ್ರ ಆಘಾತಕ್ಕೊಳಗಾದರು. ಅವರು ತಾಯಿ, ಪತ್ನಿ ಮತ್ತು ಆರು ವರ್ಷದ ಮಗುವನ್ನು ಅಗಲಿದ್ದಾರೆ. ಒಂದೂವರೆ ತಿಂಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದರು ಎಂಬುದು ದುಃಖಕರವಾದ ಸಂಗತಿ.

ಟರ್ಕಿ-ಸಿರಿಯಾ ಎರಡೂ ದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಲೆಕ್ಕವಿಲ್ಲದಷ್ಟು ಜನ ಶಿಥಿಲಗಳ ಕೆಳಗೆ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದರೂ ಕೂಡ ಮುಗಿಯುತ್ತಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!