Saturday, April 1, 2023

Latest Posts

ಟರ್ಕಿ-ಸಿರಿಯನ್ ಭೂಕಂಪ ಸಂತ್ರಸ್ತರಿಗೆ ತುರ್ತು ವೀಸಾ ಘೋಷಿಸಿದ ಜರ್ಮನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟರ್ಕಿ ಮತ್ತು ಸಿರಿಯನ್ ಭೂಕಂಪದ ಸಂತ್ರಸ್ತರಿಗೆ ಜರ್ಮನಿ ತುರ್ತಿ ವೀಸಾ ಘೋಷಿಸಿದೆ. “ಇದು ತುರ್ತು ನೆರವು” ಎಂದು ಜರ್ಮನ್ ಆಂತರಿಕ ಸಚಿವ ನ್ಯಾನ್ಸಿ ಫೈಸರ್ ತಿಳಿಸಿದರು.

ಜರ್ಮನಿಯಲ್ಲಿರುವ ಟರ್ಕಿಶ್ ಅಥವಾ ಸಿರಿಯನ್ ಕುಟುಂಬಗಳು ತಮ್ಮ ನಿಕಟ ಸಂಬಂಧಿಗಳನ್ನು ವಿಪತ್ತು ಪ್ರದೇಶದಿಂದ ತಮ್ಮ ಮನೆಗಳಿಗೆ ಕರೆತರಲು ನಾವು ಅನುಮತಿ ನೀಡುತ್ತೇವೆ ಎಂದು ಫೈಸರ್ ಹೇಳಿದ್ದಾರೆ.  ಅರ್ಹರು “ಸಾಮಾನ್ಯ ವೀಸಾಗಳನ್ನು ಹೊಂದಬಹುದು, ತ್ವರಿತವಾಗಿ ನೀಡಲಾಗುತ್ತದೆ ಮತ್ತು ಮೂರು ತಿಂಗಳವರೆಗೆ ಈ ವೀಸಾ ಮಾನ್ಯವಾಗಿರುತ್ತದೆ”. ವಿದೇಶಾಂಗ ಸಚಿವಾಲಯದ ಜಂಟಿ ಉಪಕ್ರಮವು ಸಂತ್ರಸ್ತರಿಗೆ ಜರ್ಮನಿಯಲ್ಲಿ ಆಶ್ರಯವನ್ನು ಹುಡುಕಲು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶ ನೀಡುತ್ತದೆ.

ಟರ್ಕಿಶ್ ಮೂಲದ ಸುಮಾರು 2.9 ಮಿಲಿಯನ್ ಜನರು ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ.  ಕಂಪನದಿಂದ ಪ್ರಭಾವಿತವಾಗಿರುವ ಆಗ್ನೇಯ ಟರ್ಕಿಯ 10 ಪ್ರಾಂತ್ಯಗಳಲ್ಲಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮಂಗಳವಾರ ಮೂರು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

ಕಳೆದ ಕೆಲವು ಗಂಟೆಗಳಲ್ಲಿ, ಹಟೇ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯು ಸ್ಪಷ್ಟವಾಗಿ ಬದಲಾಗಿದೆ. ವಿವಿಧ ಗುಂಪುಗಳ ನಡುವೆ ಘರ್ಷಣೆಗಳು ಹೆಚ್ಚುತ್ತಿರುವ ವರದಿಗಳಿವೆ. ISAR ಜರ್ಮನಿ ಮತ್ತು THW ನ ಶೋಧ ಮತ್ತು ರಕ್ಷಣಾ ತಂಡಗಳು ಸದ್ಯಕ್ಕೆ ಜಂಟಿ ಬೇಸ್ ಕ್ಯಾಂಪ್‌ನಲ್ಲಿ ಉಳಿಯುತ್ತವೆ. ISAR ಮತ್ತು THW ಪರಿಸ್ಥಿತಿಯು ಸುರಕ್ಷಿತವಾಗಿದೆ ಎಂದು ತಿಳಿಸಲಾಗಿದೆ. ಆಸ್ಟ್ರಿಯನ್ ಸೈನ್ಯ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಲ್ಲಿ ಭದ್ರತಾ ಅಪಾಯವಿದೆ ಎಂದು ಉಲ್ಲೇಖಿಸಿದೆ.

ಆಸ್ಟ್ರಿಯನ್ ಫೋರ್ಸಸ್ ಡಿಸಾಸ್ಟರ್ ರಿಲೀಫ್ ಯುನಿಟ್ (AFDRU) ಪ್ರಕಾರ “ಹೆಚ್ಚುತ್ತಿರುವ ಕಷ್ಟಕರವಾದ ಭದ್ರತಾ ಪರಿಸ್ಥಿತಿ”ಯಿಂದಾಗಿ ಆಸ್ಟ್ರಿಯನ್ ಸೇನೆಯು ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಟರ್ಕಿಯಲ್ಲಿ ಗುಂಪುಗಳ ನಡುವೆ ಆಕ್ರಮಣಶೀಲತೆ ಹೆಚ್ಚುತ್ತಿದೆ ಎಂದು AFDRU ನ ಲೆಫ್ಟಿನೆಂಟ್ ಕರ್ನಲ್ ಪಿಯರೆ ಕುಗೆಲ್ವೀಸ್ ಹೇಳಿಕೆಯಲ್ಲಿ ಕೊಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!