Tuesday, March 28, 2023

Latest Posts

ಗುಮ್ಮಟ ನಗರಿಯಲ್ಲಿ ಭೂಕಂಪನದ ಅನುಭವ, ರಾತ್ರೋ ರಾತ್ರಿ ಮನೆಯಿಂದ ಹೊರಬಂದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಮ್ಮಟ ನಗರಿಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ತಿಕೋಟ ಪಟ್ಟಣ ಸುತ್ತಮುತ್ತ ಪ್ರದೇಶದಲ್ಲಿ ಭೂಮಿ ನಡುಗಿದ್ದು, ಜನ ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ.

ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮನದೇವರಹಟ್ಟಿ, ಮಲಕನದೇವರ ಹಟ್ಟಿ ಎಲ್ಲ ಗ್ರಾಮಗಳಲ್ಲಿ ಕಂಪಿಸಿದ ಅನುಭವವಾಗಿದೆ.

ರಾತ್ರಿ ಭೂಮಿ ಕಂಪಿಸಿದ ಅನುಭವಾವಗಿದ್ದು, ಮಲಗಿದ್ದ ಜನ ಮನೆ ಬಿಟ್ಟು ಹೊರಗೆ ಓಡಿಬಂದಿದ್ದಾರೆ. ಅತಿ ಭಯಾನಕ ಶಬ್ದ ಕೇಳಿದ್ದು ಜನ ಭಯಭೀತರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!