Sunday, March 26, 2023

Latest Posts

ಟರ್ಕಿ-ಸಿರಿಯಾ ಭೂಕಂಪ: 50ಸಾವಿರ ಮುಟ್ಟಿದ ಸಾವಿನ ಸಂಖ್ಯೆ, ಬಗೆದಷ್ಟೂ ಸಿಗುತ್ತಿವೆ ಶವಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಟ್ಟಡಗಳ ಅವಶೇಷಗಳನ್ನು ತೆಗೆಯುತ್ತಿದ್ದಂತೆ ಮೃತದೇಹಗಳು ಬೆಳಕಿಗೆ ಬರುತ್ತಿವೆ. ಫೆಬ್ರವರಿ 16 ರಂದು ಈ ಭಾರಿ ಭೂಕಂಪ ಸಂಭವಿಸಿದೆ. ಅಂದಿನಿಂದ ಇಂದಿನವರೆಗೂ ಅವಶೇಷಗಳನ್ನು ತೆಗೆಯುವ ಪ್ರಕ್ರಿಯೆ ಮುಂದುವರಿದಿದೆ. ಇಲ್ಲಿವರೆಗೆ ಸಾವಿನ ಸಂಖ್ಯೆ 50,000 ದಾಟಿದೆ. ಟರ್ಕಿಯೊಂದರಲ್ಲೇ 44,000 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಘೋಷಿಸಿದೆ.

ಶುಕ್ರವಾರ ರಾತ್ರಿಯ ಹೊತ್ತಿಗೆ, ಟರ್ಕಿಯಲ್ಲಿ ಭೂಕಂಪದ ನಂತರ 44,218 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಸಿರಿಯಾದಲ್ಲಿ 5,194 ಜನರು ಸಾವನ್ನಪ್ಪಿದ್ದಾರೆ. ಈ ಎರಡು ಪ್ರದೇಶಗಳಲ್ಲಿ ಸಾವಿನ ಸಂಖ್ಯೆ 50,000 ದಾಟಿದೆ. ವಿಶ್ವಸಂಸ್ಥೆಯ ಅಧಿಕಾರಿಗಳು ಭೂಕಂಪದ ಕೆಲವೇ ದಿನಗಳಲ್ಲಿ ಸತ್ತವರ ಸಂಖ್ಯೆ 50,000ದಾಟಬಹುದು ಎಂದು ಅಂದಾಜಿಸಿತ್ತು. ಮತ್ತೊಂದೆಡೆ, ಟರ್ಕಿ ಮತ್ತು ಸಿರಿಯಾದಲ್ಲಿ ಪ್ರತಿದಿನ ಭೂಕಂಪಗಳು ಸಂಭವಿಸುತ್ತಿವೆ. ಇದರಿಂದ ಜನರು ಮನೆಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಕೊರೆಯುವ ಚಳಿಯಲ್ಲಿ ರಸ್ತೆಗಳಲ್ಲೇ ಕುಳಿತಿದ್ದಾರೆ.

ಭೂಕಂಪದಿಂದಾಗಿ 1.60 ಲಕ್ಷ ಕಟ್ಟಡಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ಸ್ಥಳೀಯ ಜನರಿಗೆ ಮನೆಗಳನ್ನು ಒಂದು ವರ್ಷದೊಳಗೆ ಪುನರ್ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!