ಪಾಕಿಸ್ತಾನ, ನ್ಯೂ ಗಿನಿಯಾ, ಚೀನಾದಲ್ಲಿ ಭೂಕಂಪನ, ಆತಂಕದಲ್ಲಿ ಜನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನ, ಚೀನಾ ಮತ್ತು ಪಪುವಾ ನ್ಯೂಗಿನಿಯಾದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್‌ಸಿಎಸ್‌) ಪ್ರಕಾರ, ಮುಂಜಾನೆ 03:38ಕ್ಕೆ ಪಾಕಿಸ್ತಾನದಲ್ಲಿ ಭೂಮಿ ನಡುಗಿದೆ. ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ. 03:45ಕ್ಕೆ ಚೀನಾದ ಜಿಜಾಂಗ್‌ನಲ್ಲಿ 5.0 ತೀವ್ರತೆಯಲ್ಲಿ ಭೂಕಂಪವಾಗಿದೆ. ಅಲ್ಲದೆ ಪಪುವಾ ನ್ಯೂಗಿನಿಯಾದ ಉತ್ತರ ಕರಾವಳಿಯಲ್ಲಿ 03:16ಕ್ಕೆ 6.5 ತೀವ್ರತೆಯ ಪ್ರಬಲ ಭೂಕಂಪನವಾಗಿದೆ.

ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!