ತೆಲಂಗಾಣ: ವಿಧಾನಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದಲ್ಲಿ ನವೆಂಬರ್‌ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಇದೇ ತಿಂಗಳ 15ರಿಂದ ಪ್ರಚಾರದಲ್ಲಿರುವ ಅಭ್ಯರ್ಥಿಗಳ ಮೈಕ್‌ ಇಂದು‌ ಬಂದ್ ಆಗಲಿದೆ. ರಾಜ್ಯದ 106 ಕ್ಷೇತ್ರಗಳಲ್ಲಿ ಮಂಗಳವಾರ ಸಂಜೆ 5 ಪ್ರಚಾರ ಮುಗಿಯುವ ಹಂತದಲ್ಲಿದೆ. ಇನ್ನುಳಿದ 13 ಕ್ಷೇತ್ರಗಳಲ್ಲಿ ವಿಶೇಷ ಕಾರಣದಿಂದ ಸಂಜೆ 4 ಗಂಟೆಗೆ ಪ್ರಚಾರ ಮುಕ್ತಾಯವಾಗಲಿದೆ. ಪ್ರಚಾರದ ಅವಧಿ ಮುಗಿದ ಕೂಡಲೇ ಸ್ಥಳೀಯರಲ್ಲದ ನಾಯಕರು ಕ್ಷೇತ್ರಗಳನ್ನು ತೊರೆಯಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.

ಒಟ್ಟು 119 ಕ್ಷೇತ್ರಗಳಿಗೆ 2,290 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಚುನಾವಣಾ ಆಯೋಗವು ರಾಜ್ಯಾದ್ಯಂತ 35,655 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮತದಾನದ ಸಂದರ್ಭದಲ್ಲಿ 45,000 ತೆಲಂಗಾಣ ಪೊಲೀಸರು ಭದ್ರತಾ ಕರ್ತವ್ಯದಲ್ಲಿರುತ್ತಾರೆ.

ಮತದಾನಕ್ಕೆ 48 ಗಂಟೆಗಳ ಮೊದಲು ರಾಜ್ಯಾದ್ಯಂತ ಸೆಕ್ಷನ್ 144 ಜಾರಿಯಾಗಲಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಸಭೆ, ಮನೆ-ಮನೆ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಸೂಚಿಸಿದ್ದು, ಮಂಗಳವಾರ ಸಂಜೆ 5 ರಿಂದ 30 ರ ಸಂಜೆ 5 ರವರೆಗೆ ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ನಿಷೇಧ ಹೇರಲಾಗಿದೆ.

ಬೇರೆ ಕ್ಷೇತ್ರಗಳಿಂದ ಪ್ರಚಾರಕ್ಕೆ ಬಂದವರು ಸ್ಥಳೀಯ, ವಸತಿಗೃಹ, ಅತಿಥಿ ಗೃಹ, ಇತರೆ ಪ್ರದೇಶಗಳ ಹೋಟೆಲ್‌ನಲ್ಲಿ ತಂಗಿರುವವರು ಇಂದು ಸಂಜೆ 5 ಗಂಟೆಯೊಳಗೆ ಖಾಲಿ ಮಾಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಇದೇ 29 ಮತ್ತು 30ರಂದು ರಾಜಕೀಯ ಮುಖಂಡರು ಚುನಾವಣೆ ಸಂಬಂಧ ಸಂದರ್ಶನ, ಪತ್ರಿಕಾಗೋಷ್ಠಿ, ಬಲ್ಕ್ ಎಸ್‌ಎಂಎಸ್ ಕಳುಹಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!