BREAKING | ಟರ್ಕಿಯಲ್ಲಿ ಬೆಂಬಿಡದ ಭೂಕಂಪ ಭೂತ – 5.6 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌ 

ಟರ್ಕಿ ಮತ್ತು ಸಿರಿಯಾ ಈಗಾಗಲೇ ಭಾರೀ ಭೂಕಂಪ ದುರಂತವನ್ನು ಎದುರಿಸುತ್ತಿದ್ದು, ಇದೀಗ ಮತ್ತೆ ಟರ್ಕಿಯಲ್ಲಿ ಭೂಮಿ ನಡುಗಿದೆ. 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, 24 ಗಂಟೆಗಳಲ್ಲಿ 4 ನೇ ಭೂಕಂಪಕ್ಕೆ ಇದು ಸಾಕ್ಷಿಯಾಗಿದೆ.

ಮಧ್ಯ ಟರ್ಕಿ ಪ್ರದೇಶದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ ಮತ್ತು ಭೂಕಂಪವು 2 ಕಿಮೀ ಆಳದಲ್ಲಿದೆ ಎಂದು ಇಎಂಎಸ್‌ಸಿ ತಿಳಿಸಿದೆ.

ಸಾವಿನ ಸಂಖ್ಯೆ ಈಗಾಗಲೇ 3600ಕ್ಕೂ ಅಧಿಕ ತಲುಪಿದ್ದು, ಇದರ ನಡುವೆ ಮತ್ತೆ ಕಂಪನ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ ಸೋಮವಾರ ಮುಂಜಾನೆ ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಪ್ರಬಲವಾದ 7.8 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದೆ. ಇದು ನೂರ್ಡಗಿ ಪಟ್ಟಣದಿಂದ ಸುಮಾರು 26 ಕಿಲೋಮೀಟರ್ (16 ಮೈಲುಗಳು) ಗಾಜಿಯಾಂಟೆಪ್‌ನಿಂದ ಸುಮಾರು 33 ಕಿಲೋಮೀಟರ್ (20 ಮೈಲುಗಳು) ಕೇಂದ್ರೀಕೃತವಾಗಿತ್ತು. ಆಗ್ನೇಯ ಟರ್ಕಿಯ ಕಹ್ರಮನ್ಮರಸ್ ಪ್ರದೇಶದಲ್ಲಿ 7.6 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ. ಸಂಜೆಯ ನಂತರ ಮಧ್ಯ ಟರ್ಕಿಯಲ್ಲಿ 6.0 ತೀವ್ರತೆಯ ಮೂರನೇ ಭೂಕಂಪ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!