ಚೀನಾದ ಹೋಟಾನ್ ಪಟ್ಟಣದಲ್ಲಿ ಭೂಕಂಪನ: 4.7 ತೀವ್ರತೆ ದಾಖಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಹೋಟಾನ್ ಪಟ್ಟಣದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ದಾಖಲಾಗಿದೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಪಶ್ಚಿಮ ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿರುವ ಒಯಾಸಿಸ್ ಪಟ್ಟಣವಾದ ಹೋಟಾನ್ ಆಗ್ನೇಯಕ್ಕೆ ಸುಮಾರು 263 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ.
17 ಕಿಲೋಮೀಟರ್ ಆಳದಲ್ಲಿ ಹುಟ್ಟಿಕೊಂಡಿದ್ದು, ಅದರ ಕೇಂದ್ರಬಿಂದು 35.053 ° ಉತ್ತರ ಮತ್ತು 81.395 ° E ಆಗಿತ್ತು.
ಭೂಕಂಪದಿಂದಾಗಿ ಇದುವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!