Saturday, December 10, 2022

Latest Posts

ಮ್ಯಾನ್ಮಾರ್‌ ನಲ್ಲಿ ಭೂಕಂಪ: ಈಶಾನ್ಯ ರಾಜ್ಯಗಳಲ್ಲೂ ಕಂಪನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ನೆರೆಯ ರಾಜ್ಯ ಮ್ಯಾನ್ಮಾರ್‌ ನಲ್ಲಿ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 5.2 ರ ತೀವ್ರತೆ ದಾಖಲಾಗಿದೆ. ಇದರ ಪರಿಣಾಮವು ಭಾರತದಲ್ಲೂ ಗೋಚರಿಸಿದ್ದು ಅಸ್ಸಾಂ, ಮಣಿಪುರ ಮತ್ತು ಮೇಘಾಲಯ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳಲ್ಲಿ ಕಂಪನದ ಅನುಭವವಾಗಿದೆ.

ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನ ಬರ್ಮಾದಿಂದ 162 ಕಿಮೀ ವಾಯುವ್ಯಕ್ಕೆ 140 ಕಿಮೀ ಆಳದಲ್ಲಿದೆ ಎಂದು ಭೂಕಂಪ ಮಾಪನ ಇಲಾಖೆ ತಿಳಿಸಿದೆ. ಭೂಕಂಪಕ್ಕೆ ಕಾರಣವೇನಿರಬಹುದು ಎಂಬುದು ಇನ್ನೂ ಪತ್ತೆಯಾಗಿಲ್ಲ.

ನಿನ್ನೆಯೂ ರಿಕ್ಟರ್ ಮಾಪಕದಲ್ಲಿ 4.5 ರ ತೀವ್ರತೆಯ ಭೂಕಂಪವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಿಗ್ಲಿಪುರದಿಂದ 150 ಕಿಮೀ ಉತ್ತರಕ್ಕೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!