ಈಶಾನ್ಯ ಜಪಾನ್‍ನಲ್ಲಿ ಭೂಕಂಪನ: ಸುನಾಮಿ ಮುನ್ಸೂಚನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಈಶಾನ್ಯ ಜಪಾನ್‍ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್‌ಗಳಷ್ಟು ಎತ್ತರದ ತೆರೆಗಳು ಅಪ್ಪಳಿಸುತ್ತಿದೆ.

ಇಶಿಕಾವಾ, ನೈಕತಾ ಮತ್ತು ಟೊಯಾಮಾ ನಗರಗಳ ಕರಾವಳಿ ತೀರಗಳಲ್ಲಿ ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ. ಇಶಿಕಾವಾ ಜಿಲ್ಲೆಯ ಕರಾವಳಿ ನೋಟೋಗೆ 5 ಮೀಟರ್ ಎತ್ತರದವರೆಗಿನ ಬೃಹತ್ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ. ನೈಗತ ಮತ್ತು ಟೊಯಾಮಾ ಸೇರಿದಂತೆ ಉಳಿದ ಕೆಲವು ಕರಾವಳಿ ತೀರಗಳಲ್ಲಿ 3 ಮೀಟರ್‍ವರೆಗೂ ಅಲೆಗಳು ಏಳಬಹುದು ಎಂದು ಜಪಾನ್ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಸ್ಥಳೀಯ ಕಾಲಮಾನ ಸಂಜೆ 4:10 ಸುಮಾರಿಗೆ ಇಶಿಕಾವಾ ಪ್ರಾಂತ್ಯದ ನೋಟೊ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4ರಿಂದ 7.6 ರವರೆಗೂ ಭೂಕಂಪನದ ತೀವ್ರತೆ ದಾಖಲಾಗಿದೆ. ಜಪಾನ್‍ನ ಈಶಾನ್ಯ ಭಾಗದ ನನಾವೋ ಭೂ ಕಂಪನದ ಕೇಂದ್ರ ಬಿಂದು ಎಂದು ವರದಿಯಾಗಿದೆ.

ಜನರಿಗೆ ಆದಷ್ಟು ಮನೆಗಳಿಂದ ದೂರದ ಬಯಲು ಪ್ರದೇಶಗಳಲ್ಲಿ ಇರುವಂತೆ ಸೂಚಿಸಿದೆ. ಅಲ್ಲದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!