36 ಲಕ್ಷ ಉತ್ಪಾದಕರಿಗೆ ಸಲ್ಲುತ್ತಿದೆ 200 ಕೋಟಿ ರುಪಾಯಿ – ಗುಜರಾತ್ ಹೈನು ಉದ್ಯಮ ಬೆಳೆದಿರುವುದು ಹೀಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವೈಬ್ರಂಟ್ ಗುಜರಾತ್ ಎಂಬ ಹೂಡಿಕೆದಾರರ ಸಮಾವೇಶ 2024ರ ವರ್ಷದಲ್ಲಿ ಜನವರಿ 10ರಿಂದ 1ರವರೆಗೆ ನಡೆಯಲಿದ್ದು, ರಾಜ್ಯದ ಹೈನುಗಾರಿಕೆ, ಕೃಷಿ, ತೋಟಗಾರಿಕೆಯ ಯಶೋಗಾಥೆಗಳನ್ನೇ ಪ್ರಮುಖವಾಗಿ ಬಿಂಬಿಸಲಿರುವುದಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

ಗುಜರಾತಿನಲ್ಲಿ 36 ಲಕ್ಷ ಮಂದಿ ಹೈನುಗಾರಿಕೆ ಮಾಡುವವರಿದ್ದಾರೆ. ಇವರೆಲ್ಲರ ಖಾತೆಗೆ ಪ್ರತಿದಿನವೂ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟವು ಹಾಕುವ ಒಟ್ಟೂ ಹಣದ ಮೊತ್ತ 200 ಕೋಟಿ ರುಪಾಯಿಗಳಾಗುತ್ತವೆ. ಗುಜರಾತಿನ ಹೈನೋದ್ಯಮವು 1 ಲಕ್ಷ ಕೋಟಿ ರುಪಾಯಿಗಳ ಮಾರುಕಟ್ಟೆ ವಿಸ್ತಾರ ಹೊಂದಿದೆ.

ಈ ಬೆಳವಣಿಗೆಯಲ್ಲಿ ವಿಶ್ವವಿಖ್ಯಾತ ಬ್ರಾಂಡ್ ಆಗಿರುವ ಅಮುಲ್ ಪಾತ್ರ ದೊಡ್ಡದಿದೆ. ಕಳೆದ 27 ವರ್ಷಗಳಲ್ಲಿ 30 ಲಕ್ಷ ಲೀಟರುಗಳಿಂದ 270 ಲಕ್ಷ ಲೀಟರುಗಳಿಗೆ ತನ್ನ ದಾಸ್ತಾನನ್ನು ಅಮುಲ್ ಹೆಚ್ಚಿಸಿಕೊಂಡಿದೆ ಎಂದು ಒಕ್ಕೂಟದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!