Monday, March 27, 2023

Latest Posts

ಭೂಕಂಪ ಪೀಡಿತ ಪ್ರದೇಶವಾದ ಟರ್ಕಿ: ಮತ್ತೆ ಕುಸಿದ ಭೂಮಿ, ಕೆಲ ಕಟ್ಟಡಗಳು ನೆಲಸಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟರ್ಕಿಯಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ. ಮಲತ್ಯಾ ಪ್ರಾಂತ್ಯದ ಯೆಸಿಲರ್ಟ್ ಪಟ್ಟಣದಲ್ಲಿ ಸೋಮವಾರ ರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.6 ದಾಖಲಾಗಿದೆ. ಈ ಭೂಕಂಪದಿಂದಾಗಿ ಹಲವು ಕಟ್ಟಡಗಳು ಕುಸಿದು ಬಿದ್ದಿವೆಯಂತೆ.

ಹಲವಾರು ಕಟ್ಟಡಗಳ ಅಡಿಯಲ್ಲಿ ಯಾರಾದರೂ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಕಟ್ಟಡವೊಂದು ಕುಸಿದಿದ್ದು, ತಂದೆ ಮತ್ತು ಮಗಳು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಶೇಷಗಳಿಂದ ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ. ಯೆಸಿಲರ್ಟ್ ಪಟ್ಟಣದಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ ಎಂದು ನಗರದ ಮೇಯರ್ ಮೆಹ್ಮೆತ್ ಸಿನಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದ ಅಡಿಯಲ್ಲಿ ತಂದೆ ಮತ್ತು ಮಗಳು ಸಿಕ್ಕಿಬಿದ್ದಿರುವುದು ಬೆಳಕಿಗೆ ಬಂದಿದೆ.

ಹಿಂದಿನ ಭೂಕಂಪದ ಅವಶೇಷಗಳಿಂದ ತಮ್ಮ ವಸ್ತುಗಳನ್ನು ತೆಗೆದುಕೊಳ್ಳಲು ಹೋಗಿದ್ದ ವೇಳೆ ಮತ್ತೆ ಕುಸಿದ ಭೂಮಿಯಿಂದಾಗಿ ಅವಶೇಷಗಳಡಿ ಸಿಲುಕಿದ್ದರು ಎಂದು ಸಿನಾರ್ ವಿವರಿಸಿದರು. ಇದೇ ತಿಂಗಳ 6ರಂದು ಕೂಡ ಇಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ನಂತರ ಕಟ್ಟಡಗಳ ಕುಸಿತದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಒಟ್ಟು 1,73,000 ಕಟ್ಟಡಗಳು ಕುಸಿದಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!