Tuesday, March 21, 2023

Latest Posts

ಮತ್ತೊಮ್ಮೆ ವೈರಲ್ ಆದ ಲವ್‌ ಬರ್ಡ್ಸ್: ಟ್ರೆಂಡಿಂಗ್ ಹಾಡಿಗೆ ಸಿದ್ಧಾರ್ಥ್-ಅದಿತಿ ರೀಲ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಯಕ ಸಿದ್ಧಾರ್ಥ್ ಮತ್ತು ನಾಯಕಿ ಅದಿತಿ ರಾವ್ ಹೈದರಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂಬ ಗುಸು ಗುಸು ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಶರ್ವಾನಂದ್ ನಿಶ್ಚಿತಾರ್ಥಕ್ಕೂ ಈ ಜೋಡಿ ಒಟ್ಟಿಗೆ ಭೇಟಿ ಕೊಟ್ಟಿದ್ದರು. ಇದು ಇವರಿಬ್ಬರ ಪ್ರೀತಿಯ ಸುದ್ದಿಗೆ ಮತ್ತಷ್ಟು ಬಲ ನೀಡಿದೆ.

ಅದಿತಿ ಮತ್ತು ಸಿದ್ಧಾರ್ಥ್ ಮಹಾ ಸಮುದ್ರಂ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಅದಕ್ಕೂ ಮೊದಲು ಪರಿಚಯವಿದ್ದರೂ ಆ ಸಿನಿಮಾದ ನಂತರ ಒಳ್ಳೆಯ ಗೆಳೆಯರಾದರು. ಈಗ ಈ ಜೋಡಿ ಪ್ರೀತಿಯಲ್ಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಈ ಬಾರಿ ಒಟ್ಟಿಗೆ ಟ್ರೆಂಡಿಂಗ್ ಹಾಡಿಗೆ ಹೆಜ್ಜೆ ಹಾಕಿದ್ದಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ವಿಶಾಲ್ ಅಭಿನಯದ ಎನಿಮಿ ಚಿತ್ರದ ಮಾಲಾ ತಂತುಂ..ಮಂಜರ ತಂತುಂ.. ಹಾಡು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ ರೂಪದಲ್ಲಿ ಟ್ರೆಂಡಿಂಗ್ ಆಗಿದೆ. ಸಿದ್ದಾರ್ಥ್-ಅದಿತಿ ಕೂಡ ಈ ಹಾಡಿಗೆ ಮೋಜಿನ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ.. ಡ್ಯಾನ್ಸ್ ಮಂಕೀಸ್… ರೀಲ್ ಡೀಲ್ ಎಂದು ಪೋಸ್ಟ್ ಮಾಡಿದ್ದಾರೆ. ಸಿದ್ಧಾರ್ಥ್-ಅದಿತಿ ಜೊತೆಯಾಗಿ ಮಾಡಿರುವ ಈ ಸ್ಟೆಪ್ಸ್ ಈಗ ವೈರಲ್ ಆಗಿದೆ.

https://www.instagram.com/reel/CpKs80ugnCz/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!