September 29, 2026
Tuesday, September 29, 2026
spot_img

ಪಲ್ಯ, ಗ್ರೇವಿ & More 81 | ಆರೋಗ್ಯದ ಗಣಿ ಬಾಳೆಹೂವಿನ ಪಲ್ಯ ಮಾಡುವ ಸುಲಭ ರೆಸಿಪಿ ಇಲ್ಲಿದೆ

ಬೇಕಾಗುವ ಪದಾರ್ಥಗಳು:
ಬಾಳೆಹೂವು
ಹೆಸರುಬೇಳೆ
ತೆಂಗಿನಕಾಯಿ
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಕರಿಬೇವು
ಒಣಮೆಣಸಿನಕಾಯಿ
ಹಸಿಮೆಣಸಿನಕಾಯಿ
ಅರಿಶಿನ
ಉಪ್ಪು
ಬೆಲ್ಲ
ಮಜ್ಜಿಗೆ

ತಯಾರಿಸುವ ವಿಧಾನ:
ಮೊದಲು ಬಾಳೆಹೂವಿನ ಪ್ರತಿಯೊಂದು ಎಸಳಿನ ಒಳಗಿರುವ ಹೂವುಗಳನ್ನು ತೆಗೆಯಿರಿ. ಆ ಹೂವುಗಳ ಮಧ್ಯದಲ್ಲಿರುವ ಉದ್ದನೆಯ ಕಡ್ಡಿ ತೆಗೆದುಹಾಕಬೇಕು. ನಂತರ ಹೂವುಗಳನ್ನು ಸಣ್ಣದಾಗಿ ಹೆಚ್ಚಿ, ಮಜ್ಜಿಗೆ ಮಿಶ್ರಿತ ನೀರಿನಲ್ಲಿ ಹಾಕಬೇಕು. ಇದರಿಂದ ಕಹಿ ಕಡಿಮೆಯಾಗುತ್ತದೆ ಮತ್ತು ಬಣ್ಣ ಬದಲಾಗುವುದಿಲ್ಲ.

ನಂತರ ಹೆಚ್ಚಿದ ಬಾಳೆಹೂವಿನಿಂದ ನೀರನ್ನು ಪೂರ್ತಿ ಸೋಸಿ ತೆಗೆಯಬೇಕು. ಒಂದು ಪಾತ್ರೆಯಲ್ಲಿ ಬಾಳೆಹೂವು, ನೆನೆಸಿದ ಹೆಸರುಬೇಳೆ, ಸ್ವಲ್ಪ ಉಪ್ಪು ಮತ್ತು ಅರಿಶಿನ ಹಾಕಿ, ಸ್ವಲ್ಪ ನೀರು ಸೇರಿಸಿ 70-80% ಬೇಯಿಸಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಉದ್ದಿನಬೇಳೆ, ಕರಿಬೇವು, ಒಣಮೆಣಸಿನಕಾಯಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಬೇಕು.

ಬಳಿಕ ಬೆಂದ ಬಾಳೆಹೂವು ಮತ್ತು ಹೆಸರುಬೇಳೆಯ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ. ನೀರಿದ್ದರೆ ಪೂರ್ತಿ ಆವಿಯಾಗುವವರೆಗೆ ಕೈಯಾಡಿಸಿ. ನಂತರ ಮೇಲೆ ತೆಂಗಿನಕಾಯಿ ತುರಿ ಮತ್ತು ಸ್ವಲ್ಪ ಬೆಲ್ಲ ಸೇರಿಸಿ ಚೆನ್ನಾಗಿ ಬೆರೆಸಿ. 2 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ದರೆ ಬಾಳೆಕಾಯಿ ಪಲ್ಯ ಸಿದ್ಧವಾಗುತ್ತದೆ.

Must Read