ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಉಪ್ಪು ಸೇವನೆ ಹಾಗೂ ಬಳಕೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಇದರ ಜೊತೆಗೆ ಶಾಲೆ, ರೆಸ್ಟೋರೆಂಟ್, ಹೊಟೇಲ್ ಹಾಗೂ ಪ್ಯಾಕೇಜ್ ಆಹಾರ ತಯಾರಕರಿಗೂ ಗೈಡ್‌ಲೈನ್ಸ್ ರಿಲೀಸ್ ಮಾಡಲಾಗಿದೆ.
ಅತಿಯಾದ ಉಪ್ಪಿನ ಸೇವನೆಯಿಂದಾಗಿ ರಕ್ತದೊತ್ತಡ, ಹೃದಯಾಘಾತ ಹಾಗೂ ಇನ್ನಿತರ ಸಮಸ್ಯೆಗಳು ಬಾಧಿಸುತ್ತವೆ. ರಾಜ್ಯದ ಜನರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಆಹಾರ ಇಲಾಖೆ ಮಿತವಾಗಿ ಉಪ್ಪನ್ನು ಬಳಸುವಂತೆ ಸೂಚನೆ ನೀಡಿದೆ.
ಮಾರ್ಗಸೂಚಿಯಲ್ಲಿ ಏನಿದೆ?
ಪ್ರತೀ ಮನುಷ್ಯ ಒಂದು ದಿನಕ್ಕೆ ಐದು ಗ್ರಾಂ ಅಥವಾ ಐದು ಗ್ರಾಂಗಿಂತ ಕಡಿಮೆ ಉಪ್ಪನ್ನು ಬಳಕೆ ಮಾಡಬೇಕು. ಸಂಸ್ಕರಿಸಿದ ಪ್ಯಾಕೇಜ್ ಆಹಾರ ಖರೀದಿ ಮಾಡುವ ಮುನ್ನ ಸೋಡಿಯಂ ಕಂಟೆಂಟ್ ಎಷ್ಟಿದೆ ಎಂದು ಪರೀಕ್ಷಿಸಿ. ಆದಷ್ಟು ಮನೆಯ ಊಟವನ್ನೇ ಪ್ರಿಫರ್ ಮಾಡಿ. ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಉಪ್ಪು ಕಡಿಮೆ ಹಾಕಿದ ಅಡುಗೆಯನ್ನು ಕೊಟ್ಟು ರೂಢಿ ಮಾಡಿ.
ಹೊಟೇಲ್ – ರೆಸ್ಟೋರೆಂಟ್‌ಗಳಿಗೆ ಗೈಡ್‌ಲೈನ್ಸ್
ಒಂದೇ ಬಾರಿ ಆಗದಿದ್ದರೂ ಹಂತ ಹಂತವಾಗಿ ಅಡುಗೆಗೆ ಬಳಸುವ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಬಾಣಸಿಗರಿಗೆ ಕಡಿಮೆ ಉಪ್ಪು ಬಳಕೆ ಮಾಡಿ ರುಚಿಯಾದ ಆಹಾರ ತಯಾರಿಸಲು ಕಲಿಸುವುದು, ಊಟದ ಟೇಬಲ್ ಮೇಲೆ ಉಪ್ಪಿನ ಡಬ್ಬಿ ಇಡುವುದನ್ನು ನಿಲ್ಲಿಸುವುದು, ಉಪ್ಪು ಕಡಿಮೆ ಮಾಡಿ ಎನ್ನುವ ಸಂದೇಶಗಳನ್ನು ಪ್ರದರ್ಶಿಸುವುದು.



