October 18, 2026
Sunday, October 18, 2026
spot_img

ನಿತ್ಯವೂ ಬೆಳಗ್ಗೆ ತಿಂಡಿಗೆ ರಾಗಿಮುದ್ದೆ ತಿಂದುಬಿಡಿ, ಇದರಿಂದ ಆರೋಗ್ಯಕ್ಕೆ ತುಂಬಾ ಲಾಭ ಇದೆ!

ನಿತ್ಯ ಬೆಳಗ್ಗೆ ಎದ್ದ ಹೆಣ್ಣುಮಕ್ಕಳಿಗೆ ಇವತ್ತು ತಿಂಡಿ ಏನು ಅನ್ನೋದು ದೊಡ್ಡ ಚಿಂತೆ. ಎಷ್ಟೇ ಯೋಚಿಸಿದರೂ ಕಡೆಗೆ ಮಾಡೋದು ಉಪ್ಪಿಟ್ಟು, ಚಿತ್ರಾನ್ನ, ಪುಳಿಯೊಗರೆ ಮಾತ್ರ. ಇದರಲ್ಲಿ ಯಾವ ನ್ಯೂಟ್ರಿಯಂಟ್ಸ್‌ ಇರೋದಿಲ್ಲ. ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂತಾದ್ರೆ ತಿಂಡಿಯಲ್ಲಿ ರಾಗಿಯನ್ನು ಸೇರಿಸಿ. ರಾಗಿಮುದ್ದೆ ಮಾಡಿ ಒಂದು ಸಾಂಬಾರ್‌ ಮಾಡಿಬಿಟ್ರೆ ತಿಂಡಿ ಆಗಿಬಿಡುತ್ತದೆ. ಅದೇ ಸಾಂಬಾರ್‌ಗೆ ಅನ್ನ ಮಾಡಿದ್ರೆ ಮಧ್ಯಾಹ್ನದ ಊಟವೂ ಮುಗಿದುಬಿಡುತ್ತದೆ. ರಾಗಿಮುದ್ದೆ ಮಾಡೋದಕ್ಕೆ ಎಣ್ಣೆಯೂ ಬೇಕಿಲ್ಲ, ಬೇಯಿಸುವ ಪದಾರ್ಥವಾದ ಕಾರಣ ಕ್ಯಾಲರಿ ಕೂಡ ಕಡಿಮೆ ಇರುತ್ತದೆ. ಈ ರಾಗಿ ಮುದ್ದೆಯಿಂದ ಲಾಭ ಏನು?

ರಾಗಿಯಲ್ಲಿ ಕೂಡ ಕಾರ್ಬೋಹೈಡ್ರೇಟ್ಸ್‌ ಇದೆ. ಆದರೆ ಎಲ್ಲವೂ ಕಾಂಪ್ಲೆಕ್ಸ್‌ ಕಾರ್ಬೋಹೈಡ್ರೇಟ್ಸ್‌. ಇದರಿಂದಾಗಿ ನಿಮಗೆ ಬೇಗ ಹಸಿವೂ ಆಗೋದಿಲ್ಲ. ಗ್ಲೂಕೋಸ್‌ ಲೆವೆಲ್‌ ಚೆನ್ನಾಗಿಯೇ ಇರುತ್ತದೆ.

ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಅಂಶ ಇದೆ. ಮೂಳೆಗಳ ಹಾಗೂ ಹಲ್ಲಿನ ಆರೋಗ್ಯಕ್ಕೆ ರಾಗಿ ಬೆಸ್ಟ್‌.

ರಾಗಿಯಲ್ಲಿ ಡಯಟರಿ ಫೈಬರ್‌ ಇದೆ. ಇದರಿಂದಾಗಿ ಮಲಬದ್ಧತೆ ಉಂಟಾಗೋದಿಲ್ಲ ಹಾಗೇ ಹಸಿವನ್ನು ಕಡಿಮೆ ಮಾಡಿ, ಮಧ್ಯ ಮಧ್ಯ ಬಾಯಾಡಿಸುವುದನ್ನು ಕಡಿಮೆ ಮಾಡುತ್ತದೆ.

ಇದರಲ್ಲಿ ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆ ಇದೆ. ಹೀಗಾಗಿ ಡಯಾಬಿಟಿಸ್‌ಗೂ ಇದು ಉತ್ತಮ.

ಗ್ಲೂಟೆನ್‌ ಆಗೋದಿಲ್ಲ ಎನ್ನುವವರು ಕೂಡ ಡಯಟ್‌ನಲ್ಲಿ ರಾಗಿಮುದ್ದೆಯನ್ನು ಸೇರಿಸಿಕೊಳ್ಳಿ. ಇದು ಗ್ಲೂಟನ್‌ ಫ್ರೀ ಹಾಗೂ ಇದರಲ್ಲಿ ಐರನ್‌ ಅಂಶ ಹೇರಳವಾಗಿದೆ.

Must Read