Wednesday, June 7, 2023

Latest Posts

ಈಗ ತಿನ್ನಿ ನಂತರ ಪಾವತಿಸಿ: ಮಾವಿನ ಹಣ್ಣಿಗೂ ಇಎಂಐ ಪಾವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಣಕಾಸಿನ ವಿಷಯದಲ್ಲಿ ಇಎಂಐ ಅನ್ನೋದು ಇತ್ತೀಚೆಗೆ ಬಹುತೇಕ ಬಳಕೆಯಾಗೋ ವ್ಯವಸ್ಥೆ. ವಸ್ತುವನ್ನು ಕೊಂಡುಕೊಳ್ಳಲು ನಿರ್ದಿಷ್ಟ ಮೊತ್ತವನ್ನು ಸಾಲವಾಗಿ ತೆಗೆದುಕೊಂಡು ಆ ಮೊತ್ತವನ್ನು ನಿರ್ದಿಷ್ಟ ತಿಂಗಳಿಗೆ ಸಮಾನವಾಗಿ ವಿಭಾಗಿಸಿ ತಿಂಗಳಿಗೆ ಇಂತಿಷ್ಟು ಅಂತ ಪಾವತಿಸುತ್ತ ಆ ಸಾಲವನ್ನು ತೀರಿಸುವ ವ್ಯವಸ್ಥೆ. ಸಂಬಳ ಪಡೆಯುವ ಬಹುತೇಕರು ಇಂದು ಈ ವ್ಯವಸ್ಥೆಯನ್ನು ಬಳಸಿ ತಮಗಿಷ್ಟವಾದುದನ್ನು ಖರೀದಿಸುತ್ತಾರೆ. ಮನೆ, ಕಾರು, ಬೈಕ್‌ ಇತ್ಯಾದಿ ದೊಡ್ಡ ದೊಡ್ಡ ಮೊತ್ತದ ವಸ್ತುಗಳನ್ನು ಹೊರತುಪಡಿಸಿ ಮೊಬೈಲ್‌, ಟಿವಿ, ವಾಷಿಂಗ್‌ ಮಷೀನ್‌ ಹೀಗೆ ಅನೇಕ ವಸ್ತುಗಳು ಇಎಂಐ (Equated Monthly Instalment) ಮೂಲಕ ಖರೀದಿಯಾಗುತ್ತವೆ. ಆದರೆ ಇಲ್ಲೊಬ್ಬ ವ್ಯಾಪಾರಿ ಮಾವಿನಹಣ್ಣುಗಳನ್ನೂ ಸಹ ಇಎಂಐ ಮೂಲಕ ಮಾರಾಟ ಮಾಡುತ್ತಿದ್ದಾರೆ.

ಹೌದು.. ಪುಣೆಯ ವ್ಯಾಪಾರಿ ಗೌರವ್ ಸನಾಸ್ ಎನ್ನುವವರು ಹೀಗೆ ಇಎಂಐ ಮೂಲಕ ಹಣ್ಣುಗಳ ರಾಜ ಮಾವಿನ ಹಣ್ಣನ್ನು ಮಾರಾಟ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಟಿವಿ, ಫ್ರಿಡ್ಜ್‌ ಗಳಿಗೆ ಇಎಂಐ ಮೂಲಕ ಪಾವತಿಸಬಹುದಾದರೆ ಮಾವಿನಹಣ್ಣನ್ನು ಏಕೆ ಖರೀದಿಸಬಾರದು ಎಂಬುದು ಇವರ ಲಾಜಿಕ್.‌ ಪ್ರಸ್ತುತ ಅಲ್ಫೊನ್ಸೋ ಮಾವಿನ ಹಣ್ಣಿನ ಬೆಲೆಗಳು ಸಿಕ್ಕಾಪಟ್ಟೆ ಹೆಚ್ಚಿರುವುದರಿಂದ ಮಾವು ಪ್ರಿಯರಿಗೆ ನಿರಾಸೆಯಾಗಬಾರದು ಎಂಬ ಕಾರಣಕ್ಕೆ ಈ ಸೌಲಭ್ಯವನ್ನು ಗುರುಕೃಪಾ ಟ್ರೇಡರ್ಸ್ ಮತ್ತು ಹಣ್ಣಿನ ಉತ್ಪನ್ನಗಳ ಮುಖ್ಯಸ್ಥರಾದ ಗೌರವ್‌ ಸನಾಸ್‌ ನೀಡಿದ್ದಾರೆ.

ಮಹಾರಾಷ್ಟ್ರದ ಕೊಂಕಣ ಪ್ರದೇಶದ ದೇವಗಡ ಮತ್ತು ರತ್ನಗಿರಿಯ ಅಲ್ಫೊನ್ಸೊ ಅಥವಾ ‘ಹಾಪಸ್’ ಮಾವಿನ ಹಣ್ಣುಗಳು ಅತ್ಯುತ್ತಮವೆಂದು ಪರಿಗಣಿಸಲಾಗಿದ್ದು, ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಡಜನ್‌ಗೆ 800 ರಿಂದ 1300 ರೂ.ಗೆ ಮಾರಾಟವಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ಅವರು ಇಎಂಐ ಆಫರ್‌ ನೀಡಿದ್ದು ಗ್ರಾಹಕರು ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಖರೀದಿಯ ಮೊತ್ತವನ್ನು ಮೂರು, ಆರು ಅಥವಾ 12 ತಿಂಗಳ EMI ಗಳಲ್ಲಿ ಪಾವತಿಸಬಹುದಾಗಿದೆ. ಆದರೆ ಈ ಯೋಜನೆಯು ಕನಿಷ್ಠ 5,000 ರೂ ಖರೀದಿಗೆ ಮಾತ್ರ ಲಭ್ಯವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!