HEALTH | ದಿನವೂ ಎದ್ದ ನಂತರ ತುಳಸಿ ಎಲೆ ತಿನ್ನಿ, ಯಾಕೆ ಗೊತ್ತಾ?

ಎಲ್ಲರೂ ಪೂಜಿಸುವ ತುಳಸಿಯಲ್ಲಿ ದೈವಿಗುಣಗಳ ಜೊತೆ ಆರೋಗ್ಯಕ್ಕೆ ಬೇಕಾದ ಗುಣಗಳು ಇವೆ. ಪ್ರತಿದಿನ ಬೆಳಗ್ಗೆ ಇದನ್ನು ತಿಂದರೆ ಏನೆಲ್ಲಾ ಲಾಭ ನೋಡಿ..

ತುಳಸಿ ಎಲೆಯಲ್ಲಿ ಆ್ಯಂಟಿಆಕ್ಸಿಡಂಟ್​ಗಳ ಅಂಶ ಹೆಚ್ಚು ಇರುತ್ತದೆ ಅದರ ಜೊತೆಗೆ ಅದರಲ್ಲಿರುವ ಸಾರಭೂತ ತೈಲ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಇದು ದೇಹಕ್ಕೆ ನೈಸರ್ಗಿಕವಾದ ರಕ್ಷಣಾ ಶಕ್ತಿಯನ್ನು ನೀಡುತ್ತದೆ. ಇದರ ಜೊತೆಗೆ ದೇಹದಲ್ಲಿರುವ ಬ್ಯಾಕ್ಟಿರಿಯಾ ಹಾಗೂ ವೈರಸ್​ಗಳ ಜೊತೆಗೆ ಬಲವಾಗಿ ಹೋರಾಡುತ್ತದೆ.

ತುಳಸಿಯಲ್ಲಿ ನೈಸರ್ಗಿಕವಾಗಿಯೇ ದೇಹವನ್ನು ನಿರ್ವಿಷಗೊಳಿಸುವ ಅಂದ್ರೆ ಡಿಟಾಕ್ಸಿಫೈ ಮಾಡುವ ಶಕ್ತಿಯಿದೆ. ಇದು ಹೊಟ್ಟೆಯಲ್ಲಿರುವ ವಿಷಕಾರಿ ಅಂಶಗಳನ್ನು ಸ್ವಚ್ಛಗೊಳಿಸುತ್ತದೆ. ತುಳಸಿಯನ್ನು ನೀವು ಪ್ರತಿನಿತ್ಯ ತಪ್ಪದೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನಿಮ್ಮ ಲಿವರ್ ಕಾರ್ಯಕ್ಷಮತೆಯೂ ಕೂಡ ಇನ್ನಷ್ಟು ಶಕ್ತಿಯುತಗೊಳ್ಳುತ್ತದೆ. ಜೀರ್ಣಶಕ್ತಿಯನ್ನು ಉತ್ತಮಗೊಳಿಸುವುದರ ಜೊತೆಗೆ ಒಟ್ಟಾರೆ ಆರೋಗ್ಯ ನಿರ್ವಹಣೆಯ ಮೇಲೆ ಪ್ರಮುಖ ಪಾತ್ರವಹಿಸುತ್ತದೆ.

ತುಳಸಿಯಲ್ಲಿ ಅಡಾಪ್ಟಜೆನಿಕ್ ಸಂಯುಕ್ತಗಳು ಹೆಚ್ಚು ಇರುವುದರಿಂದ ಇದು ನಿಮ್ಮ ನಿತ್ಯದ ಒತ್ತಡ, ದುಗುಡ ದುಮ್ಮಾನಗಳನ್ನು ಕೂಡ ದೂರ ಮಾಡುತ್ತದೆ. ಬೆಳಗ್ಗೆ ಎದ್ದು ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇದು ಹಾರ್ಮೊನ್ಸ್​​ಗಳ ಸಮತೋಲನ ಬಿಗಡಾಯಿಸುವಂತಹ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸನ್ನು ಸದಾ ಶಾಂತವಾಗಿ ಇಡುವಲ್ಲಿ ತುಳಸಿ ಎಲೆಗಳು ಬಹಳ ಸಹಾಯಕಾರಿ.

ತುಳಸಿ ಎಲೆಯಲ್ಲಿ ಆ್ಯಂಟಿ ಮೈಕ್ರೊಬಿಯಲ್ ಅಂಶಗಳು ಇರುವುದರಿಂದ ಇದು ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿಗೆ ರಾಮಬಾಣ. ತುಳಸಿ ಎಲೆಗಳನ್ನು ನಿರಂತರವಾಗಿ ತಿನ್ನುವುದರಿಂದ ಕಫ, ಅಸ್ತಮಾ ಸೇರಿದಂತೆ ಹಲವಾರು ಉಸಿರಾಟದ ತೊಂದರೆಗಳು ಮಂಗಮಾಯವಾಗುತ್ತವೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!