ಡಂಪ್ಲಿಂಗ್ಸ್ ಮಾಡೋದು ಹೇಗೆ?
ಈರುಳ್ಳಿ, ಕ್ಯಾರೆಟ್, ಕೋಸು, ಪನೀರ್( ನಿಮ್ಮಿಷ್ಟದ ತರಕಾರಿ ಹಾಕಬಹುದು)
ಎಣ್ಣೆ, ಉಪ್ಪು, ಜೀರಾ ಪುಡಿ, ಖಾರದಪುಡಿ
ರೈಸ್ ಪೇಪರ್ ಅಥವಾ ಗೋಧಿಹಿಟ್ಟು (ಚಪಾತಿ ರೀತಿ ಕಲಸಿದ್ದು)
ಪ್ಯಾನ್‌ಗೆ ಎಣ್ಣೆ ಹಾಕಿ, ನಂತರ ಸಣ್ಣಗೆ ಹೆಚ್ಚಿದ ಎಲ್ಲ ತರಕಾರಿ ಹಾಗೂ ಪನೀರ್ ಹಾಕಿ
ಉಪ್ಪು ಹಾಗೂ ಜೀರಾಪುಡಿ, ಖಾರದಪುಡಿ ಹಾಕಿ ಮಿಕ್ಸ್ ಮಾಡಿ ಆಫ್ ಮಾಡಿ
ಇದನ್ನು ರೈಸ್ ಪೇಪರ್ ಅಥವಾ ಗೋಧಿಹಿಟ್ಟಿನಲ್ಲಿ ಸ್ಟಫ್ ಮಾಡಿ ಪ್ಯಾನ್‌ಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ( ಗೋಧಿಹಿಟ್ಟಿನಿಂದ ಮಾಡಿದ್ರೆ ಮೊದಲು ಸ್ಟೀಮ್ ಮಾಡಿ, ನಂತರ ಪ್ಯಾನ್‌ನಲ್ಲಿ ಫ್ರೈ ಮಾಡ್ಕೊಳಿ)
ಸೂಪ್
ಮಿಕ್ಸಿಗೆ ಒಣಮೆಣಸು, ಈರುಳ್ಳಿ, ಟೊಮ್ಯಾಟೊ, ಬೆಳ್ಳುಳ್ಳಿ, ಉಪ್ಪು ಹಾಕಿ ಮಿಕ್ಸಿ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಈರುಳ್ಳಿ ಹಾಕಿ, ನಂತರ ಈ ಮಸಾಲಾ ಹಾಕಿ ಮಿಕ್ಸ್ ಮಾಡಿ
ಎಣ್ಣೆ ಬಿಟ್ಟ ನಂತರ ನೀರು ಹಾಕಿ, ಸ್ವಲ್ಪ ಆರಿಗ್ಯಾನೊ ಹಾಕಿದ್ರೆ ಸೂಪ್ ರೆಡಿ
ಬಟ್ಟಲಿನಲ್ಲಿ ಡಂಪ್ಲಿಂಗ್ಸ್ ಹಾಕಿ, ನಂತರ ಸೂಪ್ ಹಾಕಿ ಬಿಸಿ ಬಿಸಿ ತಿನ್ನಿ