Monday, July 4, 2022

Latest Posts

ನಡಾಲ್‌, ಜೊಕೊವಿಚ್, ಜ್ವೆರೆವ್‌ರಂತ ದಿಗ್ಗಜರನ್ನು ಮಣಿಸಿ ಮ್ಯಾಡ್ರಿಡ್ ಓಪನ್ ಗೆದ್ದ 19ರ ಹುಡುಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟೆನ್ನಿಸ್‌ ಜಗತ್ತಿನಲ್ಲಿಹೊಸ ಸ್ಟಾರ್‌ ಒಬ್ಬನ ಉದಯವಾಗಿದೆ. ದಿಗ್ಗಜ ಆಟಗಾರ ರಾಫೆಲ್ ನಡಾಲ್, ವಿಶ್ವದ ನಂ.1 ನೊವಾಕ್ ಜೊಕೊವಿಚ್, ವಿಶ್ವದ ನಂ.3 ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಮಣಿಸುವ ಮೂಲಕ ಮ್ಯಾಡ್ರಿಡ್ ಓಪನ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ ಹೊಸ ತಾರೆಯಾಗಿ ಉದಯಿಸಿದ್ದಾರೆ.
ಅಲ್ಕರಾಜ್‌ ಮ್ಯಾಡ್ರಿಡ್ ಓಪನ್ ನ ಫೈನಲ್‌ ನಲ್ಲಿ ಜ್ವೆರೆವ್ ವಿರುದ್ಧ 6-3, 6-1 ರ ನೇರ ಸೆಟ್‌ ಗಳಲ್ಲಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದಕ್ಕೂ ಮುನ್ನ ಅಲ್ಕರಾಜ್‌ ಆಟಕ್ಕೆ ದಿಗ್ಗಜ ಆಟಗಾರರೇ ಮಂಡಿಯೂರಿದ್ದರು. ಕ್ವಾಟರ್‌ ಫೈನಲ್‌ ನಲ್ಲಿ ಸ್ವದೇಶಿಯ ರಫೇಲ್‌ ನಡಾಲ್‌ ವಿರುದ್ಧ 6-2, 1-6, 6-3 ಅಂತರದಿಂದ ಗೆದ್ದು ಅಲ್ಕರಾಜ್‌ ಇತಿಹಾಸ ಬರೆದಿದ್ದರು. ಸೆಮಿಸ್‌ ನಲ್ಲಿ ಎದುರಾಗಿದ್ದ ಭಲಾಡ್ಯ ಆಟಗಾರ ಜಾಕೋವಿಚ್ ವಿರುದ್ಧ ಬರೊಬ್ಬರಿ 3 ಗಂಟೆ 36 ನಿಮಿಷ ಹೋರಾಡಿದ ಯುವ ಆಟಗಾರ 6-7(5), 7-5, 7-6(5) ರಲ್ಲಿ ಗೆದ್ದಾಗ ಆತನ ಆಟಕ್ಕೆ ಆಟಕ್ಕೆ ಇಡೀ ಟೆನ್ನಿಸ್‌ ಜಗತ್ತು ಬೆರಗಾಗಿತ್ತು. ಗೆಲುವಿನ ನಾಗಲಾಟೋಟ ಮುಂದುವರೆಸಿದ ಅಲ್ಕರಾಜ್‌ ಫೈನಲ್‌ ನಲ್ಲಿಯೂ ಗೆದ್ದು ಬೀಗಿದ್ದಾರೆ. ಅಲ್ಕರಾಜ್‌ ಅವರ ಈ ಗೆಲುವು ಮುಂದಿನ ವಾರ ಆರಂಭವಾಗಲಿರುವ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯ ನೆಚ್ಚಿನ ಆಟಗಾರನ ಸ್ಥಾನಮಾನಕ್ಕೆ ಅವರನ್ನು ತಲುಪಿಸಿದೆ.
ಇನ್ನೊಂದು ವಿಚಾರವೆಂದರೆ ಅವೆ ಮಣ್ಣಿನ ಅಂಕಣದಲ್ಲಿ ನಡಾಲ್ ರನ್ನು ಸೋಲಿಸಿದ ಮೊದಲ ಹದಿಹರೆಯದ ಆಟಗಾರ ಅಲ್ಕರಾಜ್‌. 6’1″ ಎತ್ತರವಿರುವ ಅಲ್ಕಾರಾಜ್ ಆಟ ಬಹುತೇಕ ನಡಾಲ್‌ ರನ್ನು ಹೋಲುತ್ತದೆ. ನಡಾಲ್‌ ರಂತೆಯೇ ಲೀಲಾಜಾಲ ಫೋರ್‌ ಹ್ಯಾಂಡ್‌ ಶಾಟ್‌ ಗಳು ಹಾಗೂ ಸೂಕ್ಷ್ಮವಾದ ಡ್ರಾಪ್ ಶಾಟ್‌ನ ಕೌಶಲ್ಯವನ್ನು ಹೊಂದಿದ್ದಾರೆ. ನಡಾಲ್‌ ಆಟಕ್ಕೆ ಸಾಮ್ಯತೆ ಇರುವುದರಿಂದ ಅಲ್ಕರಾಜ್‌ ನಡಾಲ್‌ ಉತ್ತರಾಧಿಕಾರಿಯೆಂದು ಬಣ್ಣಿಸಲಾಗುತ್ತಿದೆ.
ಮ್ಯಾಡ್ರಿಡ್‌ ವಿಜಯದ ನಂತರ ಅಲ್ಕರಾಜ್‌ ವೃತ್ತಿ ಜೀವನದ ಅತ್ಯುತ್ತಮ ಎಟಿಪಿ ರ್ಯಾಂಕಿಂಗ್‌ ನಂ.6ಕ್ಕೆ ಏರಿದ್ದಾರೆ. ವರ್ಷದ ಹಿಂದೆ 120ನೇ ರ್ಯಾಂಕಿಂಗ್‌ ನಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss