ಮನೆಯಲ್ಲೇ ಮಾಡಿ ಗೋಧಿ ಹಿಟ್ಟಿನ ಆಪಲ್‌ ಕೇಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕರಿಯಲ್ಲಿನ ಆಪಲ್‌ ಕೇಕ್‌ಗಿಂತ ಮನೆಯಲ್ಲಿ ಮಾಡುವ ಆಪಲ್‌ ಕೇಕ್‌ ರುಚಿ ಹೆಚ್ಚು. ಬೇಕರಿಯಲ್ಲಿ ಅಳಿದುಳಿದ ಕೇಕ್‌ನಿಂದ ತಯಾರು ಮಾಡ್ತಾರೆ. ಮನೆಯಲ್ಲೇ ತಯಾರು ಮಾಡಿದ್ರೆ ಆರೋಗ್ಯಕರ ಆಹಾರವಾಗುತ್ತೆ. ಕಲೆ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿದ್ರೆ ಹತ್ತೇ ನಿಮಿಷದಲ್ಲಿ ಸಾಫ್ಟ್‌ ಕೇಕ್‌ ರೆಡಿ ಆಗುತ್ತೆ ಬನ್ನಿ ಮಾಡುವ

ಬೇಕಾಗುವ ಪದಾರ್ಥಗಳು

1 ಕಪ್ ಗೋಧಿ ಹಿಟ್ಟು
3/4 ಕಪ್ ಬೆಲ್ಲ
1/2 ಕಪ್ ನೀರು
3 ಟೀಸ್ಪೂನ್ ದಪ್ಪ ತುಪ್ಪ
2-3 ಟೀಸ್ಪೂನ್ ಮುರಿದ ಗೋಡಂಬಿ(ಡ್ರೈ ಫ್ರೂಟ್ಸ್‌ ನಿಮ್ಮ ಆಯ್ಕೆ)
2 ಪುಡಿ ಮಾಡಿದ ಏಲಕ್ಕಿ

ಮಾಡುವ ವಿಧಾನ

ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ನಿಮಿಗಷ್ಟವಾದ ಡ್ರೈ ಫ್ರೂಟ್ಸ್‌ ಹಾಕಿ ಹೊಂಬಣ್ಣಕ್ಕೆ ಬರುವವರೆಗೂ ಹುರಿಯಿರಿ. ಅದಕ್ಕೆ ಒಂದು ಕಪ್‌ ಗೋಧಿ ಹಿಟ್ಟು ಸೇರಿಸಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೂ ಹುರಿದು ಒಂದು ಅಗಲವಾದ ಬಟ್ಟಲು ಅಥವಾ ತಟ್ಟೆಗೆ ಹಾಕಿ. ಬಳಿಕ ಅದೇ ಬಾಣಲೆಗೆ ಮುಕ್ಕಾಲು ಕಪ್‌ ಬೆಲ್ಲ ಹಾಗೂ ನೀರು ಹಾಕಿ ಬೆಲ್ಲ ಕರಗುವವರೆಗೂ ಕಾಯಿಸಿ(ಪಾಕ ಬೇಡ) ನಂತರ ಅದನ್ನು ಗೋಧಿ ಹಿಟ್ಟಿಗೆ ಹಾಕಿ ಚೆನ್ನಾಗಿ ಕಲಸಿ ಸಣ್ಣ ಗಾತ್ರದ ಉಂಡೆ ಮಾಡಿದ್ರೆ ಗೋಧಿ ಹಿಟ್ಟಿನ ಆಪಲ್‌ ಕೇಕ್‌ ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!