Friday, October 7, 2022

Latest Posts

ಇಡಿ-ಸಿಬಿಐಗೆ ಮನೇಲಿ ಜಾಗ ಕೊಡುವೆ ಕಚೇರಿ ಮಾಡಿಕೊಳ್ಳಲಿ: ತೇಜಶ್ವಿ ಯಾದವ್ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಡಿ, ಸಿಬಿಐ ನವರು ನನ್ನ ಮನೆಯಲ್ಲೇ ಕಚೇರಿಗಳನ್ನು ತೆರೆಯಬಹುದು ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.
ಬಿಹಾರದಲ್ಲಿ ನಿತೀಶ್‌ ಕುಮಾರ್ ಬಿಜೆಪಿ ತೊರೆದು ಆರ್‌ಜೆಡಿ ಹಾಗೂ ಇತರ ಪಕ್ಷಗಳ ಮಹಾಘಟಬಂಧನ ಸರ್ಕಾರದ ಸಿಎಂ ಆಗಿದ್ದಾರೆ. ಅಲ್ಲದೆ, ಲಾಲೂ ಪ್ರಸಾದ್‌ ಯಾದವ್‌ ಪುತ್ರ ತೇಜಸ್ವಿ ಯಾದವ್‌ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿದ್ದಾರೆ.ಈ ವೇಳೆ ಬಿಜೆಪಿ ಕೇಂದ್ರ ತನಿಖಾ ದಳಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ತೇಜಸ್ವಿ ಯಾದವ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇಡಿ, ಸಿಬಿಐಗೆ ಹೆದರುವ ಬದಲು ಇದು ಶಾಂತಿ ತಂದರೆ ತನ್ನ ನಿವಾಸದಲ್ಲಿ ಕಚೇರಿಗಳನ್ನು ಸ್ಥಾಪಿಸಲು ಏಜೆನ್ಸಿಗಳಿಗೆ ಅವಕಾಶ ನೀಡಲು ಸಿದ್ಧರಾಗಿದ್ದೇನೆ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್‌ ಯಾದವ್‌ ಗುರುವಾರ ಹೇಳಿದ್ದಾರೆ.

ತಾನು ಮೊದಲ ಅವಧಿಯಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾಗ ಈ ಏಜೆನ್ಸಿಗಳಿಗೆ ಹೆದರುತ್ತಿರಲಿಲ್ಲ ಎಂದ ತೇಜಸ್ವಿ ಯಾದವ್‌, ಜತೆಗೆ ಬಿಹಾರ ರಾಜ್ಯದ ಹಿತಾಸಕ್ತಿಗಾಗಿ ನಾನು ಕೇಂದ್ರ ಸರ್ಕಾರದೊದಿಗೆ ಜಗಳವಾಡುತ್ತಿದ್ದೆ . ಈ ಮುನ್ನ 2015 ರಿಂದ 2017 ರ ಅವಧಿಯಲ್ಲಿ ಬಿಹಾರ ಉಪಮುಖ್ಯಮಂತ್ರಿಯಾಗಿದ್ದರು.

ಅಂದಿನಿಂದ ನಾನು ಪ್ರಬುದ್ಧನಾಗಿದ್ದೇನೆ, ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸಿದ್ದೇನೆ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ತಂದೆ ಲಭ್ಯವಿಲ್ಲದಿದ್ದಾಗ ಪಕ್ಷದ ಪ್ರಚಾರವನ್ನು ಮುನ್ನಡೆಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ,ನಾನು ಕ್ರಿಕೆಟ್‌ ಆಡುತ್ತಿದ್ದಾಗ, ಅಂದರೆ ನಾನು ಚಿಕ್ಕವನಿದ್ದಾಗಲೇ ನನ್ನ ವಿರುದ್ಧ ಪ್ರಕರಣ ದಾಖಲಾಗಿತ್ತು. ನಾನು ಯಾವುದೇ ಅಪರಾಧ ಮಾಡಿದ್ದರೆ ಈವರೆಗೆ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ತೇಜಸ್ವಿ ಯಾದವ್ ಪ್ರಶ್ನೆ ಮಾಡಿದ್ದಾರೆ.

ಇನ್ನು, ಇತ್ತೀಚೆಗೆ ಸ್ಥಾಪನೆಯಾದ ತಮ್ಮ ಸರ್ಕಾರ 2020ರ ವಿಧಾನಸಭೆ ಚುನಾವಣೆ ವೇಳೆ ಆಶ್ವಾಸನೆ ನೀಡಿದಂತೆ 10 ಲಕ್ಷ ಜನರಿಗೆ ಉದ್ಯೋಗ ನೀಉವುದಾಗಿ ತೇಜಸ್ವಿ ಯಾದವ್‌ ಗುರುವಾರ ಭರವಸೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!