Friday, September 29, 2023

Latest Posts

I-N-D-I-A ಮೈತ್ರಿ ಒಕ್ಕೂಟಕ್ಕೆ ಶಾಕ್ ಕೊಟ್ಟ ಇಡಿ: ಜಾರ್ಖಂಡ್ ಸಿಎಂಗೆ ಸಮನ್ಸ್ ಜಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಬಿಜೆಪಿ ವಿರುದ್ಧ ಒಗ್ಗಟ್ಟಾಗಿರುವ ವಿಪಕ್ಷಗಳು ಎರಡು ಸಭೆ ನಡೆಸಿ ಮೂರನೆ ಸಭೆಗೆ ಸಜ್ಜಾಗಿದೆ. ಇದರ ಬೆನಲ್ಲೇ ಈ ಒಕ್ಕೂಟದ ಪ್ರಮುಖ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾಗೆ ಇಡಿ ಶಾಕ್ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಸಿಎಂ ಹಿಮಂತ್ ಸೊರೆನ್‌ಗೆ ಇಡಿ ಸಮನ್ಸ್ ನೀಡಿದೆ.

ಮುಖ್ಯಮಂತ್ರಿ ಹಿಮಂತ್ ಸೊರೆನ್‌ಗೆ ಆಗಸ್ಟ್ 14 ರಂದು ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ರಾಂಚಿಯ ಇಡಿ ಕಚೇರಿಯಲ್ಲಿ ಸೊರೆನ್ ವಿಚಾರಣೆ ನಡೆಯಲಿದೆ. ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ನಡೆಸಿರುವ ಅಕ್ರಮ ಗಣಿಕಾರಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಿಮಂತ್ ಸೊರೆನ್ ಹೇಳಿಕೆ ದಾಖಲಿಸಲು ಸಮನ್ಸ್ ನೀಡಲಾಗಿದೆ.

ವಿಪಕ್ಷಗಳ ಮೈತ್ರಿ ಒಕ್ಕೂಟದಲ್ಲಿ ಹಿಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಪ್ರಮುಖ ಪಕ್ಷವಾಗಿದೆ. ಜಾರ್ಖಂಡ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಹಿಮಂತ್ ಸೊರೆನ್ ನೆರವು ಇಂಡಿಯಾ ಒಕ್ಕೂಟಕ್ಕೆ ಅಗತ್ಯಗತ್ಯ. ಇದೀಗ ಹಿಮಂತ್ ಸೊರೆನ್‌ಗಂ ಸಂಕಷ್ಟ ಎದುರಾಗಿದೆ. ಈ ಹಿಂದೆ ವಿಚಾರಣೆ ನೋಟಿಸ್ ನೀಡಿದ್ದ ಬಳಿಕ ಆಕ್ರೋಶ ಹೊರಹಾಕಿದ್ದ ಸೊರೆನ್, ಈ ರೀತಿ ವಿಚಾರಣೆ ನಡೆಸುವುದಕ್ಕಿಂತ ನೇರವಾಗಿ ಬಂಧಿಸಿ ಎಂದು ಸವಾಲು ಹಾಕಿದ್ದರು.

ಹಲವು ತಿಂಗಳಿನಿಂದ ಜಾರ್ಖಂಡ್ ಅಕ್ರಮ ಗಣಿಕಾರಿಕೆ ಕುರಿತು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಹಲವು ರಾಜಕಾರಣಿಗಳು, ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!